ನವದೆಹಲಿ: ಮೇ 8ರಿಂದಲೇ ಸುಪ್ರಿಂಕೋರ್ಟ್‌ಗೆ ಬೇಸಿಗೆ ರಜೆ - BC Suddi
ನವದೆಹಲಿ: ಮೇ 8ರಿಂದಲೇ ಸುಪ್ರಿಂಕೋರ್ಟ್‌ಗೆ ಬೇಸಿಗೆ ರಜೆ

ನವದೆಹಲಿ: ಮೇ 8ರಿಂದಲೇ ಸುಪ್ರಿಂಕೋರ್ಟ್‌ಗೆ ಬೇಸಿಗೆ ರಜೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಬೇಸಿಗೆ ರಜೆ ಒಂದು ವಾರ ಮೊದಲೇ ಅಂದರೆ ಮೇ 8ರಿಂದಲೇ ಜಾರಿಗೆ ಬರಲಿದೆ ಎಂದು ಸುಪ್ರಿಂ ಕೋರ್ಟ್‌ ಸೋಮವಾರ ಪ್ರಕಟಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ತಮ್ಮ ಕೆಲಸದ ಮೊದಲ ದಿನವೇ, ಸುಪ್ರೀಂ ಕೋರ್ಟ್‌ನ ವಕೀಲರ ಸಂಘ ಸೇರಿದಂತೆ ವಿವಿಧ ಸಂಘಗಳ ಪದಾಧಿಕಾರಿಗಳ ಜೊತೆಗೆ ಕೋವಿಡ್ ಪರಿಸ್ಥಿತಿ ಕುರಿತು ಸಭೆ ನಡೆಸಿದರು. ಹಿರಿಯ ವಕೀಲ, ಎಸ್‌ಸಿಬಿಎ ಅಧ್ಯಕ್ಷ ವಿಕಾಸ್ ಸಿಂಗ್ ಅವರು, ಬೇಸಿಗೆ ರಜೆಯು ಮೇ 8ರಿಂದ ಆರಂಭವಾಗಿ ಜೂನ್‌ 27ರವರೆಗೂ ಇರುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಮೊದಲಿನ ವೇಳಾಪಟ್ಟಿಯಂತೆ ಬೇಸಿಗೆ ರಜೆ ಮೇ 14ರಂದು ಆರಂಭವಾಗಬೇಕಿತ್ತು. ಅಲ್ಲದೆ, ಸುಪ್ರಿಂಕೋರ್ಟ್‌ನ ನೂತನ ಕಟ್ಟಡದಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸುವ ತೀರ್ಮಾನಕ್ಕೂ ಸಿಜೆಐ ಸಮ್ಮತಿಸಿದರು ಎಂದು ತಿಳಿಸಿದರು.

ಬೆಂಗಳೂರಿನಿಂದ ತಮ್ಮೂರಿನತ್ತ ಹೊರಟ ಜನ : 12 ಸಾವಿರಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ