ಬಿಸಿಲಿನ ತಾಪಕ್ಕೆ ನಿಮ್ಮ ಚರ್ಮ ಒಣಗುತ್ತಿದೆಯೇ? ಹಾಗಾದ್ರೆ ಈ ಸರಳ ಮನೆಮದ್ದು ಉಪಯೋಗಿಸಿ ನೋಡಿ.. - BC Suddi
ಬಿಸಿಲಿನ ತಾಪಕ್ಕೆ ನಿಮ್ಮ ಚರ್ಮ ಒಣಗುತ್ತಿದೆಯೇ? ಹಾಗಾದ್ರೆ ಈ ಸರಳ ಮನೆಮದ್ದು ಉಪಯೋಗಿಸಿ ನೋಡಿ..

ಬಿಸಿಲಿನ ತಾಪಕ್ಕೆ ನಿಮ್ಮ ಚರ್ಮ ಒಣಗುತ್ತಿದೆಯೇ? ಹಾಗಾದ್ರೆ ಈ ಸರಳ ಮನೆಮದ್ದು ಉಪಯೋಗಿಸಿ ನೋಡಿ..

ಬೆಂಗಳೂರು : ಸೌತೆಕಾಯಿ ರಸ, ಅಲೋವೆರಾ ಜೆಲ್, ಜೇನುತುಪ್ಪ, ಕಾಫಿ, ಸಕ್ಕರೆ ಇವಿಷ್ಟನ್ನು ತೆಗೆದುಕೊಂಡು, ಒಂದು ಪಾತ್ರೆಯಲ್ಲಿ ಜೇನುತುಪ್ಪ ಮತ್ತು ಸಕ್ಕರೆ ಮತ್ತು ನೀರನ್ನು ಬೆರೆಸಿ ಬಿಸಿ ಮಾಡಿ ಪಾಕ ತಯಾರಿಸಿಕೊಳ್ಳಿ. ಸಕ್ಕರೆ ಕರಗಿದ ಬಳಿಕ ಕಾಫಿ ಪುಡಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ. ಬಳಿಕ ಇದು ತಣ‍್ಣಗಾದ ಮೇಲೆ ಇದಕ್ಕೆ ಸೌತೆಕಾಯಿ ರಸ, ಅಲೋವೆರಾ ಜೆಲ್ ಮಿಕ್ಸ್ ಮಾಡಿ ಚರ್ಮಕ್ಕೆ ಟೋನರ್ ಆಗಿ ಬಳಸಿ.

ಬೇಸಿಗೆ ಕಾಲ ಶುರುವಾಗಿದೆ. ಈ ವೇಳೆ ಅತಿಯಾದ ಬೆವರು, ಸುಸ್ತು, ಆಯಾಸದಿಂದಾಗಿ ಮುಖ ಕಳೆಗುಂದುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಚರ್ಮ ಹೊಳಪಿನಿಂದ ಕೂಡಿರಲು ಈ ಜೆಲ್ ತಯಾರಿಸಿ ಹಚ್ಚಿ.

ಇದು ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ. ಮತ್ತು ಅಲೋವೆರಾ ಹಾಗೂ ಸೌತೆಕಾಯಿ ಬಿಸಿಲಿನ ತಾಪವನ್ನು ತಣಿಸಿ ಚರ್ಮವನ್ನು ತಂಪಾಗಿಸುತ್ತದೆ.

error: Content is protected !!