ಭ್ರಷ್ಟಾಚಾರವೇ ವ್ಯಾಪಕವಾಗಿರುವ ರಾಜ್ಯದಲ್ಲಿಆಡಳಿತ ಯಂತ್ರ ಕುಸಿದಿದೆ : ಸಿದ್ದರಾಮಯ್ಯ - BC Suddi
ಭ್ರಷ್ಟಾಚಾರವೇ ವ್ಯಾಪಕವಾಗಿರುವ ರಾಜ್ಯದಲ್ಲಿಆಡಳಿತ ಯಂತ್ರ ಕುಸಿದಿದೆ : ಸಿದ್ದರಾಮಯ್ಯ

ಭ್ರಷ್ಟಾಚಾರವೇ ವ್ಯಾಪಕವಾಗಿರುವ ರಾಜ್ಯದಲ್ಲಿಆಡಳಿತ ಯಂತ್ರ ಕುಸಿದಿದೆ : ಸಿದ್ದರಾಮಯ್ಯ

ದಾವಣಗೆರೆ : ಸರ್ಕಾರದಲ್ಲಿಒಬ್ಬರ ಮೇಲೆ ಒಬ್ಬರಿಗೆ ನಂಬಿಕೆಯಿಲ್ಲ. ಇದಕ್ಕೆ ಈಶ್ವರಪ್ಪ ಪತ್ರ ಬರೆದಿರುವುದು ಸಾಕ್ಷಿ. ಪರಸ್ಪರ ಹೊಂದಾಣಿಕೆ, ನಂಬಿಕೆಯಿಲ್ಲದ  ಸರ್ಕಾರದಿಂದ ಆಡಳಿತ ವ್ಯವಸ್ಥೆ ಕುಸಿದಿದೆ. ಈ ಕಾರಣಕ್ಕೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬೇಕು ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಭ್ರಷ್ಟಾಚಾರವೇ ವ್ಯಾಪಕವಾಗಿರುವ ರಾಜ್ಯದಲ್ಲಿಆಡಳಿತ ಯಂತ್ರ ಕುಸಿದಿದೆ. ರಾಜ್ಯದಲ್ಲಿ ಸರ್ಕಾರವೇ ಇಲ್ಲಾ ರಾಜ್ಯಪಾಲರು ತಕ್ಷಣ ರಾಷ್ಟ್ರಪತಿ ಆಳ್ವಿಕೆಗೆ ಜಾರಿಗೆ ಶಿಫಾರಸ್ಸು ನೀಡಬೇಕೆಂದು ಎಂದು ಹೇಳಿದರು.

ಸ್ವಪಕ್ಷೀಯರಿಂದಲೇ ಆರೋಪ ಕೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೊಡಬೇಕು. ಸಿಡಿ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸದ್ಯ ಸಿಡಿ ಪ್ರಕರಣ ತನಿಖೆ ಆಗುತ್ತಿದೆ. ತನಿಖೆಯ ಬಳಿಕವೇ ಸತ್ಯಾಂಶ ಹೊರ ಬರುತ್ತದೆ. ಅಲ್ಲಿಯವರೆಗೆ ಕಾದು ನೋಡುವ ಎಂದರು.

‘ವಿಜಯೇಂದ್ರ ಬಿಎಸ್‌ವೈ ಅವರ ಮಗನಲ್ಲವೇ? ಡಿಎನ್‌‌ಎ ಟೆಸ್ಟ್ ಮಾಡಿಸಬೇಕೇ?’ – ಕಾಂಗ್ರೆಸ್ ಪ್ರಶ್ನೆ

error: Content is protected !!