'ಸಿದ್ದರಾಮಯ್ಯರನ್ನು ಜನರ ಕಷ್ಟಕ್ಕೆ ಸ್ಪಂದಿಸಿದ್ದಾಗ, ಅವರು ಹತ್ತಿರ ಆಗುತ್ತಾರೆ : ರಮೇಶ್ ಕುಮಾರ್ - BC Suddi
‘ಸಿದ್ದರಾಮಯ್ಯರನ್ನು ಜನರ ಕಷ್ಟಕ್ಕೆ ಸ್ಪಂದಿಸಿದ್ದಾಗ, ಅವರು ಹತ್ತಿರ ಆಗುತ್ತಾರೆ : ರಮೇಶ್ ಕುಮಾರ್

‘ಸಿದ್ದರಾಮಯ್ಯರನ್ನು ಜನರ ಕಷ್ಟಕ್ಕೆ ಸ್ಪಂದಿಸಿದ್ದಾಗ, ಅವರು ಹತ್ತಿರ ಆಗುತ್ತಾರೆ : ರಮೇಶ್ ಕುಮಾರ್

ಬೆಂಗಳೂರು: “ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಎಂದು ಕರೆಯಬೇಡಿ, ಹಾಗೆ ಕರೆದರೆ ಅದು ಅವರಿಗೆ ಅಪಮಾನ ಮಾಡಿದಂತೆ ಆಗಲಿದೆ” ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದವರು, ಬದಲಾದ ಸಂದರ್ಭದಲ್ಲಿ ಅವರು ಮತ್ತೆ ಮುಖ್ಯಮಂತ್ರಿ ಆಗಲು ಸಾಧ್ಯವಾಗಲಿಲ್ಲ. ಜನ ಇಷ್ಟ ಪಟ್ಟರೆ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ” ಎಂದರು.

ಇನ್ನು “ಅವರು ಜನರ ಕಷ್ಟಕ್ಕೆ ಸ್ಪಂದಿಸಿದ್ದಾಗ, ಅವರು ಹತ್ತಿರ ಆಗುತ್ತಾರೆ. ಮುಂದೆ ಮತ್ತೆ ಒಳ್ಳೆಯದಾಗಬಹುದು. ಅವರನ್ನು ಮಾಜಿ ಮುಖ್ಯಮಂತ್ರಿ ಎಂದು ಕರೆಯಬೇಡಿ ಮನವಿ ಮಾಡುತ್ತೇನೆ. ಅವರನ್ನ ವಿರೋಧ ಪಕ್ಷದ ನಾಯಕರು ಎಂದು ಕರೆಯಿರಿ” ಎಂದಿದ್ದಾರೆ.

error: Content is protected !!