ಕುತೂಹಲಕ್ಕೆ ಕಾರಣವಾಯಿತು ಸಿದ್ದು,ಡಿಕೆಶಿ ಲಕ್ಷ್ಮೀ ಮಿಟಿಂಗ್ ! - BC Suddi
ಕುತೂಹಲಕ್ಕೆ ಕಾರಣವಾಯಿತು ಸಿದ್ದು,ಡಿಕೆಶಿ ಲಕ್ಷ್ಮೀ ಮಿಟಿಂಗ್ !

ಕುತೂಹಲಕ್ಕೆ ಕಾರಣವಾಯಿತು ಸಿದ್ದು,ಡಿಕೆಶಿ ಲಕ್ಷ್ಮೀ ಮಿಟಿಂಗ್ !

ಬೆಂಗಳೂರು: ಸದನದಲ್ಲಿ ಸಿಡಿ ವಿಚಾರ ಅತ್ಯಂತ ಹಸಿ ಬಿಸಿ ಚರ್ಚೆಗೆ ಕಾರಣವಾಗಿ ಇಡೀ ಸದನ ಇದರಲ್ಲಿಯೇ ಹೋಗಿರುವುದು ವಿಪರ್ಯಾಸ. ಇನ್ನು ಎಸ್ ಐಟಿ ಸಿಡಿ ಪ್ರಚಾರಕರ ಬೆನ್ನುಹಿಂದೆ ಬಿದ್ದಿದೆ, ಸಂತ್ರಸ್ತ ಯುವತಿಗೆ ಅನ್ಯಾಯ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿಲ್ಲ. ಈ ಸಿಡಿ ಅಸಲಿಯೋ- ನಕಲಿಯೋ ಮೊದಲು ಆ ಬಗ್ಗೆ ತನಿಖೆ ಮಾಡಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಇದಾದ ಬಳಿಕ ವಿಪಕ್ಷ ನಾಯಕರ ಕೊಠಡಿಯಲ್ಲಿ ಅರ್ಧಗಂಟೆ ಸಿದ್ದು,ಡಿಕೆಶಿ ಲಕ್ಷ್ಮೀ ಹೆಬ್ಬಾಳ್ಕರ್, ನಡೆಸಿದ ಮಾತುಕತೆ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಏಕಾಂತತ ಚರ್ಚೆಯಲ್ಲಿ ಈ ಕೇಸ್ ನಲ್ಲಿ ಸುಖಾಸುಮ್ಮನೆ ನನ್ನ ಹೆಸರನ್ನು ಎಳೆದು ತರುತ್ತಿದ್ದಾರೆ ಎಂದು ಲಕ್ಷ್ಮೀ ಅಸಮಾಧಾನ ವ್ಯಕ್ತಪಡಿಸಿದರು.

ಸ್ವದೇಶಿ ಕೂ ಆಪ್ ನಲ್ಲಿ ಹೂಡಿಕೆ ಮಾಡಿದ ಜಾವಗಲ್ ಶ್ರೀನಾಥ್

ಬಳಿಕ ಡಿಕೆಶಿ ಜತೆ ಮಾತನಾಡಿದ ಲಕ್ಷ್ಮೀ ಅವರನ್ನು ‘ಏನ್ರೀ ಸಿಎಂನ ಬ್ಲಾಕ್ ಮೇಲ್ ಮಾಡ್ತಿದ್ದೀರಂತೆ?’ ಎಂದು ಡಿಕೆಶಿ ಹಾಸ್ಯಭರಿತವಾಗಿ ಕೇಳಿದರು. ಇದಕ್ಕುತ್ತರಿಸಿದ ಲಕ್ಷ್ಮೀ, ‘ಸರ್ ನಾನೇಕೆ ಬ್ಲಾಕ್ ಮೇಲ್ ಮಾಡ್ಲಿ. ಯಾರು ಹೇಳಿದ್ದು?’ ಎಂದರು. ‘ನಿಮ್ಮ ನಾಯಕ ಬಸನಗೌಡ ಪಾಟೀಲ್ ಯತ್ನಾಳ್. ನಿಮ್ಮ ಸಮುದಾಯದ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ನಾಯಕ’ ಎಂದು ಡಿಕೆಶಿ ಛೇಡಿಸಿದರು.

‘ಓ ಅವರಾ! ಅವರು ಎಲ್ಲ ಹೇಳ್ತಾರೆ ಬಿಡಿ. ಕ್ಷೇತ್ರದ ಕೆಲಸ ಮಾಡಿಸಿಕೊಂಡ್ರೆ ಬ್ಲಾಕ್ ಮೇಲ್ ಮಾಡಿದಂತೆ ಆಗುತ್ತಾ?’ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳುತ್ತಿದ್ದಂತೆ ‘ಮತ್ತೆ ನಾನು ಸದನದಲ್ಲಿ ಪ್ರಸ್ತಾಪ ಮಾಡಿದಾಗ ನೀವು ಇದಕ್ಕೆ ಧ್ವನಿ ಗೂಡಿಸಲಿಲ್ಲ…’ ಎಂದು ಡಿಕೆಶಿ ಹೇಳಿದರು. ‘ಸರ್ ದೊಡ್ಡವರು ಮಾತನಾಡುವಾಗ ಸಣ್ಣವರು ಮಧ್ಯಪ್ರವೇಶ ಮಾಡಬಾರದು ಎಂದು ಸುಮ್ಮನಿದ್ದೆ’ ಎಂದು ಲಕ್ಷ್ಮೀ ಸಮಜಾಯಿಷಿ ಕೊಟ್ಟರು.

error: Content is protected !!