ಶಿವಮೊಗ್ಗ: ತ್ರಿಸ್ಟಾರ್‌ ಹೋಟೆಲ್‌ನ್ನೇ ಕಡಿಮೆ ದರದಲ್ಲಿ ಕೋವಿಡ್‌ ಚಿಕಿತ್ಸೆಗೆಂದು ಬಿಟ್ಟುಕೊಟ್ಟ ವೈದ್ಯ ದಂಪತಿಗಳು - BC Suddi
ಶಿವಮೊಗ್ಗ: ತ್ರಿಸ್ಟಾರ್‌ ಹೋಟೆಲ್‌ನ್ನೇ ಕಡಿಮೆ ದರದಲ್ಲಿ ಕೋವಿಡ್‌ ಚಿಕಿತ್ಸೆಗೆಂದು ಬಿಟ್ಟುಕೊಟ್ಟ ವೈದ್ಯ ದಂಪತಿಗಳು

ಶಿವಮೊಗ್ಗ: ತ್ರಿಸ್ಟಾರ್‌ ಹೋಟೆಲ್‌ನ್ನೇ ಕಡಿಮೆ ದರದಲ್ಲಿ ಕೋವಿಡ್‌ ಚಿಕಿತ್ಸೆಗೆಂದು ಬಿಟ್ಟುಕೊಟ್ಟ ವೈದ್ಯ ದಂಪತಿಗಳು

ಶಿವಮೊಗ್ಗ: ಕೊರೊನಾ ಸೋಂಕಿತರು ಎಂದು ತಿಳಿದರೆ ಸಾಕು ನಾವೆಲ್ಲ ಮಾರುದ್ದ ಜಿಗಿದು ದೂರ ನಿಲ್ಲುತ್ತೇವೆ. ಈಗಾಗಲೇ ದೇಶದಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ದೇಶದಾದ್ಯಂತ ಆಕ್ಸಿಜನ್ ಹಾಗೂ ಬೆಡ್ ವ್ಯವಸ್ಥೆ ಕೊರತೆ ಕಾಣುತ್ತಿದೆ.

ಪರಿಸ್ಥಿತಿ ಹೀಗಿರುವಾಗ ಶಿವಮೊಗ್ಗದಲ್ಲಿ ವೈದ್ಯ ದಂಪತಿಗಳು ತಮ್ಮ ತ್ರಿಸ್ಟಾರ್‌ ಹೋಟೆಲ್‌ನ್ನೇ ಕಡಿಮೆ ದರದಲ್ಲಿ ಕೋವಿಡ್‌ ಚಿಕಿತ್ಸೆಗೆಂದು ಬಿಟ್ಟುಕೊಟ್ಟಿದ್ದಾರೆ. ಶಿವಮೊಗ್ಗದ ಲಕ್ಷ್ಮೀ ಪ್ಯಾಲೇಸ್‌ ಹೋಟೆಲ್‌ನಲ್ಲಿ ನಗರದ ಖ್ಯಾತ ವೈದ್ಯಕೀಯ ಸಂಸ್ಥೆ ಸರ್ಜಿ ಆಸ್ಪತ್ರೆಯು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ಆರಂಭಿಸಿದೆ.

ಹೋಂ ಐಸೋಲೇಷನ್‌ನಲ್ಲಿ ಸೋಂಕಿಗೆ ಹೆದರಿ ರೋಗ ಉಲ್ಬಣಗೊಳಿಸಿಕೊಳ್ಳುವ ಅಪಾಯ ತಪ್ಪಿಸಲು ಈ ವೈದ್ಯರ ತಂಡ ಶ್ರಮಿಸುತ್ತಿದೆ. ಯಾವುದೇ ಹೋಟೆಲ್‌ ಅನ್ನು ಒಮ್ಮೆ ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತನೆ ಮಾಡಿದರೆ ಗ್ರಾಹಕರ ಮನೋಭಾವ ಬದಲಾಗಬಹುದು ಎಂಬ ಅರಿವಿದ್ದರೂ ತಮ್ಮ ವೈದ್ಯ ಧರ್ಮ ಪರಿಪಾಲನೆಗೆ ತಮ್ಮ ತ್ರೀಸ್ಟಾರ್‌ ಹೋಟೆಲ್‌ ಅನ್ನು ಡಾ. ಹೇಮಂತ್‌ ಬಿಟ್ಟುಕೊಟ್ಟಿದ್ದಾರೆ.

ಚಾಮರಾಜನಗರ: ಚಿಕಿತ್ಸೆ ಫಲಕಾರಿಯಾಗದೆ ಕೊರೋನಾ ರೋಗಿಗಳು ಸತ್ತಿದ್ದಾರೆ : ಯಾರೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿಲ್ಲ: ಸುರೇಶ್ ಕುಮಾರ್