ಏಳು ಬಾರಿ ಸಂಸದೆಯಾಗಿ ನನ್ನ ಸುದೀರ್ಘ ವೃತ್ತಿ ಜೀವನದಲ್ಲಿ ಇಂತಹ ನಿರ್ದಯ ಹಾಗೂ ಕ್ರೂರ ಪ್ರಧಾನಿಯನ್ನು ಎಂದೂ ಕಂಡಿಲ್ಲ: ಮೋದಿಯನ್ನ ಕುಟುಕಿದ ದೀದಿ - BC Suddi
ಏಳು ಬಾರಿ ಸಂಸದೆಯಾಗಿ ನನ್ನ ಸುದೀರ್ಘ ವೃತ್ತಿ ಜೀವನದಲ್ಲಿ ಇಂತಹ ನಿರ್ದಯ ಹಾಗೂ ಕ್ರೂರ ಪ್ರಧಾನಿಯನ್ನು ಎಂದೂ ಕಂಡಿಲ್ಲ: ಮೋದಿಯನ್ನ ಕುಟುಕಿದ ದೀದಿ

ಏಳು ಬಾರಿ ಸಂಸದೆಯಾಗಿ ನನ್ನ ಸುದೀರ್ಘ ವೃತ್ತಿ ಜೀವನದಲ್ಲಿ ಇಂತಹ ನಿರ್ದಯ ಹಾಗೂ ಕ್ರೂರ ಪ್ರಧಾನಿಯನ್ನು ಎಂದೂ ಕಂಡಿಲ್ಲ: ಮೋದಿಯನ್ನ ಕುಟುಕಿದ ದೀದಿ

ಕೋಲ್ಕತ್ತಾ: ದೇಶದಲ್ಲಿ ಕೈಗಾರಿಕಾ ಬೆಳವಣಿಗೆ ನಿಂತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಗಡ್ಡ ಮಾತ್ರ ಬೆಳೆಯುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವ್ಯಂಗ್ಯವಾಡಿದ್ದಾರೆ. ಪಶ್ಚಿಮ ಬಂಗಾಳದ ಡೆಬ್ರಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಮುಖವನ್ನು ನೋಡಲು ನಾವು ಬಯಸುವುದಿಲ್ಲ.

ದಂಗೆಕೋರರು ಮತ್ತು ಲೂಟಿಕೋರರನ್ನು ನಾವು ಬಯಸುವುದಿಲ್ಲ. ನಮಗೆ ದುರ್ಯೋಧನ ಮತ್ತು ದುಶಾಸನ ಬೇಡ. ಕೆಲವು ಬಾರಿ ತಾವು ಸ್ವಾಮಿ ವಿವೇಕಾನಂದ ಎಂದು ಹೇಳಿಕೊಳ್ಳುತ್ತಾರೆ. ಕ್ರೀಡಾಂಗಣಕ್ಕೆ ತಮ್ಮದೇ ಹೆಸರನ್ನು ಇಟ್ಟುಕೊಳ್ಳುತ್ತಾರೆ. ಅವರ ಮೆದುಳಿನಲ್ಲಿ ಏನೋ ಸಮಸ್ಯೆ ಇದೆ. ಅವರ ಸ್ಕ್ರೂ ಲೂಸ್ ಆದಂತೆ ಕಾಣುತ್ತದೆ ಎಂದು ವಾಗ್ದಾಳಿ ನಡೆಸಿದರು.

ಏಳು ಬಾರಿ ಸಂಸದೆಯಾಗಿ ನನ್ನ ಸುದೀರ್ಘ ವೃತ್ತಿ ಜೀವನದಲ್ಲಿ ಇಂತಹ ನಿರ್ದಯ ಹಾಗೂ ಕ್ರೂರ ಪ್ರಧಾನಿಯನ್ನು ಎಂದೂ ಕಂಡಿಲ್ಲ. ಬಿಜೆಪಿ ಎಂದರೆ ಭಾರತೀಯ ಜೊಘೊನ್ನೊ ಪಾರ್ಟಿ(ಭಾರತೀಯ ಕೆಟ್ಟ ಪಕ್ಷ). ಬಿಜೆಪಿ ರಾಕ್ಷಸ, ರಾವಣ, ದುರ್ಯೋಧನ, ದುಶಾಸನರ ಹಾಗೂ ಅಶಾಂತಿ, ಭಯೋತ್ಪಾದನೆಯ ಪಕ್ಷವಾಗಿದೆ ಎಂದು ಗುಡುಗಿದರು.

error: Content is protected !!