ತನ್ನ ನೆಚ್ಚಿನ ಬೈಕ್ ಮಾರಾಟ ಮಾಡಿ ಆಕ್ಸಿಜನ್ ಖರೀದಿಗೆ ಮುಂದಾದ ನಟ ಹರ್ಷವರ್ಧನ್ - BC Suddi
ತನ್ನ ನೆಚ್ಚಿನ ಬೈಕ್ ಮಾರಾಟ ಮಾಡಿ ಆಕ್ಸಿಜನ್ ಖರೀದಿಗೆ ಮುಂದಾದ ನಟ ಹರ್ಷವರ್ಧನ್

ತನ್ನ ನೆಚ್ಚಿನ ಬೈಕ್ ಮಾರಾಟ ಮಾಡಿ ಆಕ್ಸಿಜನ್ ಖರೀದಿಗೆ ಮುಂದಾದ ನಟ ಹರ್ಷವರ್ಧನ್

ಹೈದರಾಬಾದ್: ಕೊರೊನಾ ಸಂಕಷ್ಟದಲ್ಲಿರುವವರಿಗೆ ಅನೇಕ ಸಿನಿಮಾ ತಾರೆಯರು ತಮಗಾದ ಸಹಾಯ ಮಾಡುತ್ತಿದ್ದು, ಟಾಲಿವುಡ್ ಹಾಗೂ ಬಾಲಿವುಡ್ ನಟ ಹರ್ಷವರ್ಧನ್ ರಾನೆ ಕೂಡ ಅಗತ್ಯ ಇರುವವರಿಗೆ ಉಚಿತವಾಗಿ ಆಕ್ಸಿಜನ್ ಸಾಂಧ್ರಕಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.

ತೆಲುಗು ಸಿನಿಮಾ ‘ಫಿದಾ’ದಲ್ಲಿ ನಟಿಸಿರುವ ಹರ್ಷವರ್ಧನ್, ಇದೀಗ ಆಮ್ಲಜನಕದ ಕೊರತೆ ನೀಗಿಸಲು ಮುಂದಾಗಿದ್ದು, ಅದಕ್ಕಾಗಿ ತನ್ನ ನೆಚ್ಚಿನ ಬೈಕ್ ಮಾರಾಟ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಕುರಿತು ತಮ್ಮ ಟ್ವಿಟರಿನಲ್ಲಿ ಬರೆದುಕೊಂಡಿರುವ ಹರ್ಷವರ್ಧನ್, “ಆಕ್ಸಿಜನ್ ಖರೀದಿಗಾಗಿ ಫಂಡ್ ಕಲೆಕ್ಟ್ ಮಾಡಲಾಗುತ್ತಿದ್ದು, ಈ ಅಭಿಯಾನಕ್ಕಾಗಿ ನನ್ನ ಬೈಕ್ ಸೇಲ್ ಮಾಡುತ್ತಿದ್ದೇನೆ. ಇದರ ಮಾರಾಟದಿಂದ ಬರುವ ಹಣದಲ್ಲಿ ಆಕ್ಸಿಜನ್ ಸಾಂಧ್ರಕಗಳನ್ನು ಖರೀದಿಸಿ, ಅಗತ್ಯ ಇರುವವರಿಗೆ ನೀಡಲಾಗುತ್ತದೆ” ಎಂದಿದ್ದಾರೆ.

ಭಾರತದಲ್ಲಿ ಪ್ರತಿ ನಿತ್ಯ 3 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಟಾಲಿವುಡ್ ಮೇಗಾ ಸ್ಟಾರ್ ಚಿರಂಜೀವಿ ಸೇರಿದಂತೆ ಹಲವರು ತಮ್ಮ ಕೈಲಾದ ಮಟ್ಟಿಗೆ ಜನರಿಗೆ ಸಹಾಯ ಮಾಡುತ್ತಿದ್ದು, ಇದೀಗ ಅವರ ಸಾಲಿಗೆ ನಟ ಹರ್ಷವರ್ಧನ್ ಸೇರಿದ್ದಾರೆ.

ದೇಶದಲ್ಲಿರುವ ನೈಟ್ರೋಜನ್‌‌‌ ಘಟಕ ಪರಿವರ್ತಿಸಿ ಆಕ್ಸಿಜನ್‌‌ ಉತ್ಪಾದಕ ಘಟಕ ಕೇಂದ್ರವನ್ನಾಗಿ ಮಾಡುವ ಬಗ್ಗೆ ಸಭೆ ನಡೆಸಿದ ಪ್ರಧಾನಿ ಮೋದಿ