ಧಾರ್ಮಿಕ ಕೇಂದ್ರ ,ಶಾಲಾ - ಕಾಲೇಜು ಬಂದ್ - ರಾಜ್ಯಾದ್ಯಂತ 144 ಸೆಕ್ಷನ್ ಜಾರಿಗೆ ತಜ್ಞರ ಶಿಫಾರಸ್ಸು - BC Suddi
ಧಾರ್ಮಿಕ ಕೇಂದ್ರ ,ಶಾಲಾ – ಕಾಲೇಜು ಬಂದ್ – ರಾಜ್ಯಾದ್ಯಂತ 144 ಸೆಕ್ಷನ್ ಜಾರಿಗೆ ತಜ್ಞರ ಶಿಫಾರಸ್ಸು

ಧಾರ್ಮಿಕ ಕೇಂದ್ರ ,ಶಾಲಾ – ಕಾಲೇಜು ಬಂದ್ – ರಾಜ್ಯಾದ್ಯಂತ 144 ಸೆಕ್ಷನ್ ಜಾರಿಗೆ ತಜ್ಞರ ಶಿಫಾರಸ್ಸು

ಬೆಂಗಳೂರು: ರಾಜ್ಯದಲ್ಲಿ ತೀವ್ರಗತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ 144 ಸೆಕ್ಷನ್ ಜಾರಿಗೆ ಕೋವಿಡ್​ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ತಿಳಿದುಬಂದಿದೆ.

ಈ ನಡುವೆ ಸಿಎಂ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ತುರ್ತು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಸಚಿವರು, ಹಿರಿಯ ಅಧಿಕಾರಿಗಳು
ಭಾಗಿಯಾಗಲಿದ್ದು, ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಜಾರಿಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಇನ್ನು ಸರ್ಕಾರಕ್ಕೆ ಕೋವಿಡ್​ ತಾಂತ್ರಿಕ ಸಲಹಾ ಸಮಿತಿಯೂ ಕೊರೊನಾ ನಿಯಂತ್ರಣಕ್ಕೆ, ಶಾಲಾ – ಕಾಲೇಜು, ಚಿತ್ರಮಂದಿರ ಬಂದ್​ ಮಾಡಲು ಶಿಫಾರಸು ಮಾಡಿದ್ದು, ಜನ ಸೇರುವ ಕಾರ್ಯಕ್ರಮಗಳೆಲ್ಲಾವನ್ನು ನಿಷೇಧಗೊಳಿಸಲು ಸಲಹೆ ನೀಡಿದ್ದಾರೆ.

ಮಾತ್ರವಲ್ಲದೆ ಬಾರ್ಬರ್ ಶಾಪ್, ಪಬ್ ದೇವಸ್ಥಾನ ಚರ್ಚ್ ಮಸೀದಿ ಸೇರಿದಂತೆ ಧಾರ್ಮಿಕ ಕೇಂದ್ರ, ಮಾರುಕಟ್ಟೆ ಹೀಗೆ ಜನ ಸೇರುವ ಪ್ರದೇಶಗಳನ್ನು ಮುಚ್ಚುವಂತೆ ಶಿಫಾರಸ್ಸು ಮಾಡಿದ್ದಾರೆ. ಕೋವಿಡ್​ ತಾಂತ್ರಿಕ ಸಲಹಾ ಸಮಿತಿ ನೀಡಿದ ಶಿಫಾರಸ್ಸುಗಳ ಬಗ್ಗೆ ಮುಖ್ಯಮಂತ್ರಿಗಳು ತುರ್ತು ಸಭೆಯಲ್ಲಿ ಚರ್ಚಿಸಿ ಕಠಿಣ ಕ್ರಮ ಜಾರಿಗೊಳಿಸುವ ಸಾಧ್ಯತೆ ಇದೆ.

ಇನ್ಮುಂದೆ ವಿಳಾಸದ ದಾಖಲೆ ಇಲ್ಲದೆ LPG ಬುಕ್ ಮಾಡಬಹುದು