ಬೆಂಗಳೂರಿನಲ್ಲಿ ಏ.20ರವರೆಗೆ ಸೆ.144 ಜಾರಿ - BC Suddi
ಬೆಂಗಳೂರಿನಲ್ಲಿ ಏ.20ರವರೆಗೆ ಸೆ.144 ಜಾರಿ

ಬೆಂಗಳೂರಿನಲ್ಲಿ ಏ.20ರವರೆಗೆ ಸೆ.144 ಜಾರಿ

 

ಬೆಂಗಳೂರು: ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬೆಂಗಳೂರಿನಾದ್ಯಂತ ಇಂದಿನಿಂದ ಏ.20ರ ಮಧ್ಯರಾತ್ರಿವರೆಗೆ ಸೆ.144 ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಕೊರೋನಾ ನಿಯಂತ್ರಣಕ್ಕಾಗಿ ರಾಜಧಾನಿಯಲ್ಲಿ ಕೊರೋನಾ ನಿಯಮಾವಳಿ ಜಾರಿಯಲ್ಲಿದ್ದು, ಇದರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ವೇಳೆ ಗುಂಪು ಸೇರುವಂತಿಲ್ಲ, ಯಾವುದೇ ಪ್ರತಿಭಟನೆ, ಮುಷ್ಕರ ನಡೆಸುವಂತಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

error: Content is protected !!