ಮಾಸ್ಕ್ ಧರಿಸಿ ಅಂತರ ಪಾಲಿಸುವಂತೆ ಮನವಿ ಮಾಡಿದ ನಟ - ಸತೀಶ್ ನೀನಾಸಂ - BC Suddi
ಮಾಸ್ಕ್ ಧರಿಸಿ ಅಂತರ ಪಾಲಿಸುವಂತೆ ಮನವಿ ಮಾಡಿದ ನಟ – ಸತೀಶ್ ನೀನಾಸಂ

ಮಾಸ್ಕ್ ಧರಿಸಿ ಅಂತರ ಪಾಲಿಸುವಂತೆ ಮನವಿ ಮಾಡಿದ ನಟ – ಸತೀಶ್ ನೀನಾಸಂ

ಕೊರೊನಾ ವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸ್ಯಾಂಡಲವುಡ್ ನಟ ಸತೀಶ್ ನೀನಾಸಂ ಸಾಮಾಜಿಕ ಜಾಲತಾಣಗಳಲ್ಲಿ ಮಾಸ್ಕ್ ಸಾಮಾಜಿಕ ಅಂತರ ಪಾಲಿಸುವಂತೆ ಜನತೆಗೆ ಮನವಿ ಮಾಡಿ ಸಾಮಾಜಿಕ ಕಳಕಳಿ ಮಿಡಿದಿದ್ದಾರೆ.

ಮಾಸ್ಕ್ ಬಳಸಿ ಸಾಮಾಜಿಕ ಅಂತರ ಪಾಲಿಸಿ ಎಂದು ವೈದ್ಯರು ಹೇಳಿದ್ರೂ ನಾವ್ಯಾರು ಆ ನಿಯಮ ಪಾಲಿಸಲೇ ಇಲ್ಲಾ. ಈಗಿರುವ ಕೊರೊನಾ ಹೇಗಿದೆ ಅಂದ್ರೇ ? ವೈರಸ್ ರೂಪಾಂತರ ಗೊಂಡಿದೆ ಯಾರಿಗೂ ನೆಗಡಿ ಜ್ವರ ಕೆಮ್ಮು ಕೊರೊನಾ ಗುಣಲಕ್ಷಣಗಳೇ ಕಾಣಿಸಿಕೊಳ್ಳದೆ ವೈರಸ್ ಬರುತ್ತೆ ಕೆಲವರಿಗೆ ಕಾಣಿಸುತ್ತೆ ವೈದ್ಯರು ನಾವೇನು ಮಾಡ್ಬೇಕು ಎಂಬುದೇ ತಿಳಿಯುತ್ತಿಲ್ಲಾ ಅಂತಾರೇ.

ಮೊದ್ಲು ನಾವು ಹೊರಗಡೆ ಓಡಾಡೋರು ಮಾಸ್ಕ್ ಹಾಕೋ ಬೇಕು, ನಮ್ಮ ರಕ್ಷಣೆ ಮಾಡ್ಕೋಂಡು ಇನ್ನೋಬ್ಬರ ಪ್ರಾಣವನ್ನು ಉಳಿಸಬೇಕು ನಮ್ಮಿಂದ ಬೇರೆಯವರಿಗೆ ಕೊರೊನಾ ಬಂದ್ರೇ ಯಾರು ಯಾರ ಕುಟುಂಬದಲ್ಲಿ ಏನು ಪರಿಸ್ಥಿತಿ ಇರತ್ತೋ ಏನೋ ? ಹಾಸ್ಪಿಟಲ್’ಗೆ ಕಟ್ಟೋಕೆ ಹಣ ಇರತ್ತೋ ಇಲ್ವೋ ? ಅವ್ರು ಕುಟುಂಬದಲ್ಲಿ ಎಷ್ಟು ಜನಾ ಇದ್ದಾರೋ ಎನೋ ? ಹಾಸನದಲ್ಲಿ ಒಬ್ಬರು ತಮ್ಮ ತಾಯಿಗೆ ಕೊರೊನಾ ಬಂದಿದ್ದನ್ನು ನೋಡಲಾರದೆ ನೇಣು ಹಾಕಿಕೊಂಡ್ರು, ಅದಲ್ಲದೆ ನಮ್ಮ ದೊಡ್ಡಮ್ಮ ತೀರಿಹೋದ್ರು ನನಗೆ ಅವ್ರ ಮುಖ ನೋಡೋಕೆ ಆಗ್ಲಿಲ್ಲಾ.

ಒಬ್ರಲ್ಲಾ ಇಬ್ರಲ್ಲಾ ಎಷ್ಟೋ ಜನರ ಪರಿಸ್ಥಿತಿಯನ್ನು ನಾವು ಟಿವಿಗಳಲ್ಲಿ ನೋಡ್ತಾ ಇದ್ದೀವಿ ಒಮ್ಮೋಮ್ಮೆ ಈ ಪರಿಸ್ಥಿತಿಗೆ ನಾವೇ ಹೊಣೆಗಾರರಾ ? ಅನಿಸುತ್ತೇ ಯಾರನ್ನು ದ್ವೇಷಿಸೋಕೆ ಬರಲ್ಲಾ.

ಈ ಕಾರಣದಿಂದ ನಾವೆಲ್ಲರೂ ಮಾಸ್ಕ್ ಬೆಳಸೋಣ ಸಾಮಾಜಿಕ ಅಂತರ ಪಾಲಿಸೋಣ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಕೊರೊನಾ ಸೋಂಕಿನ ವಿರುದ್ಧ ಗೆದ್ದ ಮನಮೋಹನ್ ಸಿಂಗ್ :  ಆಸ್ಪತ್ರೆಯಿಂದ ಬಿಡುಗಡೆ