ಐಎಎಸ್ ಅಧಿಕಾರಿ ಶರತ್ ವರ್ಗಾವಣೆ ಸಿಎಟಿ ಮರು ಪರಿಶೀಲಿನೆಗೆ ಸರ್ಕಾರಕ್ಕೆ ಆದೇಶ - BC Suddi
ಐಎಎಸ್ ಅಧಿಕಾರಿ ಶರತ್ ವರ್ಗಾವಣೆ ಸಿಎಟಿ ಮರು ಪರಿಶೀಲಿನೆಗೆ ಸರ್ಕಾರಕ್ಕೆ ಆದೇಶ

ಐಎಎಸ್ ಅಧಿಕಾರಿ ಶರತ್ ವರ್ಗಾವಣೆ ಸಿಎಟಿ ಮರು ಪರಿಶೀಲಿನೆಗೆ ಸರ್ಕಾರಕ್ಕೆ ಆದೇಶ

ಬೆಂಗಳೂರು : ಐಎಎಸ್ ಅಧಿಕಾರಿ ಶರತ್ ಅವರ ವರ್ಗಾವಣೆ ಆದೇಶ ಮರುಪರಿಶೀಲನೆ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಆಡಳಿತ ನ್ಯಾಯಮಂಡಳಿ ನಿರ್ದೇಶನ ನೀಡಿದೆ.

ಟಿ.ಎಸ್‌.ಆರ್. ಸುಬ್ರಮಣಿಯನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನಗಳಿಗೆ ನಿಯಮಾನುಸಾರ ಭಾರತೀಯ ಆಡಳಿತ ಸೇವೆ ತಿದ್ದುಪಡಿ ನಿಯಮಗಳನ್ನು ಕೇಂದ್ರ ಸರ್ಕಾರ 2014ರಲ್ಲಿ ಜಾರಿಗೆ ತಂದಿದೆ. ಪ್ರಮುಖವಾಗಿ ಐಎಎಸ್ ಅಧಿಕಾರಿಗಳ ಕನಿಷ್ಠ ಅಧಿಕಾರದ ಅವಧಿಯನ್ನು ಈ ನಿಯಮಾವಳಿ ಒಳಗೊಂಡಿದೆ.

ಈ ನಿಯಮಾವಳಿ ಅಡಿಯಲ್ಲಿ 2014ರ ಜನವರಿ 31ರಲ್ಲಿ ರಾಜ್ಯ ಸರ್ಕಾರವು ಸಿಎಸ್‌ಬಿ ರಚಿಸಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಮಂಡಳಿಗೆ ಅಧ್ಯಕ್ಷರಾಗಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಸದಸ್ಯರಾಗಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಅವರು ಸಂಯೋಜಕರಾಗಿದ್ದರು.
ಬಳಿಕ 2014ರ ಮಾರ್ಚ್ 12ರಂದು ಅದನ್ನು ನಿಷ್ಕ್ರಿಯಗೊಳಿಸಲಾಗಿತ್ತು.

ಮಂಡಳಿಯನ್ನು ಅನಿರ್ದಿಷ್ಟಾವಧಿ ತನಕ ಅಮಾನ್ಯ ಸ್ಥಿತಿಯಲ್ಲಿ ಇರಿಸುವುದು ಸರ್ವೋಚ್ಛ ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿದೆ’ ಎಂದು ನ್ಯಾಯಾಂಗ ಸದಸ್ಯ ಸುರೇಶ್‌ಕುಮಾರ್ ಮೊಂಗಾ ಮತ್ತು ಆಡಳಿತ ಸದಸ್ಯ ರಾಕೇಶ್‌ಕುಮಾರ್ ಗುಪ್ತಾ ಅವರನ್ನು ಒಳಗೊಂಡ ಸಿಎಟಿ ಪೀಠ ಅಭಿಪ್ರಾಯ ತಿಳಿಸಿತ್ತು.

ಈ ಸಂದರ್ಭ 2020ರ ಸೆಪ್ಟೆಂಬರ್ 28ರಂದು ಬಿ.ಶರತ್ ಅವರನ್ನು ವರ್ಗಾವಣೆ ಮಾಡಿ ಹೊರಡಿಸಿರುವ ಆದೇಶವನ್ನು ಮಂಡಳಿಯ ಶಿಫಾರಸು ಆಧರಿಸಿ ಮರಳಿ ಪರಿಶೀಲಿಸಬೇಕೆಂದು ಸಿಎಟಿ ಆದೇಶ ನೀಡಿತು.

ಐಎಎಸ್ ಅಧಿಕಾರಿ ಶರತ್ ವರ್ಗಾವಣೆ ಪ್ರಕರಣವನ್ನು ವಿಚಾರಣೆ ನಡೆಸಬೇಕು ಎಂದು ಮಂಡಳಿಗೂ ಪೀಠ ನಿರ್ದೆಶಿಸಿತು. ಈ ಎಲ್ಲಾ ಪ್ರಕ್ರಿಯೆಗಳು ಒಂದು ತಿಂಗಳ ಒಳಗಾಗಿ ಪೂರ್ಣ ಮಾಡುವಂತೆ ಸೂಚನೆ ನೀಡಿದೆ.

error: Content is protected !!