ಬರಾಕ್ ಒಬಾಮ ಅಜ್ಜಿ ಸಾರಾ ಒಬಾಮ ವಿಧಿವಶ : ಗ್ರ್ಯಾನ್ನಿ ನೆನೆದು ಭಾವುಕರಾದ ಮಾಜಿ ಅಧ್ಯಕ್ಷ - BC Suddi
ಬರಾಕ್ ಒಬಾಮ ಅಜ್ಜಿ ಸಾರಾ ಒಬಾಮ ವಿಧಿವಶ : ಗ್ರ್ಯಾನ್ನಿ ನೆನೆದು ಭಾವುಕರಾದ ಮಾಜಿ ಅಧ್ಯಕ್ಷ

ಬರಾಕ್ ಒಬಾಮ ಅಜ್ಜಿ ಸಾರಾ ಒಬಾಮ ವಿಧಿವಶ : ಗ್ರ್ಯಾನ್ನಿ ನೆನೆದು ಭಾವುಕರಾದ ಮಾಜಿ ಅಧ್ಯಕ್ಷ

ಅಮೆರಿಕ ದೇಶದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅಜ್ಜಿ ಸಾರಾ ಒಬಾಮ ಇಂದು ತಮ್ಮ 99ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ಸಾರಾ ಪುತ್ರಿ ಮಾರ್ಸಂತ್ ಒನ್ಯಾಂಗೊ ತಿಳಿಸಿದ್ದಾರೆ. ಮಾಮಾ ಒಬಾಮ್ ಎಂದೇ ಕರೆಯುತ್ತಿದ್ದ ಸಾರಾ ಒಬಾಮ ಕಿಸುಮು ಎಂಬಲ್ಲಿನ ಜರಮೊಗಿ ಒಗಿಂಗ ಒಡಿಂಗ್ ಟೀಚಿಂಗ್ ರೆಫರಲ್ ಆಸ್ಪತ್ರೆಗೆ ಕಳೆದ ಒಂದು ವಾರದ ಹಿಂದೆ ಆನಾರೋಗ್ಯದ ಸಮಸ್ಯೆ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು ಅವರ ಕೋವಿಡ್ ತಪಾಸಣಾ ವರದಿ ನೆಗೆಟಿವ್ ಬಂದಿದೆ ಎಂದು ಒಬಾಮ್ ಕುಟುಂಬದ ಶೇಖ್ ಇಸ್ಮಾಯಿಲ್ ಹೇಳಿಕೆ ನೀಡಿದ್ದಾರೆ.

ಈ ಕುರಿತು ಬರಾಕ್ ಒಬಾಮ ಅವರೊಂದಿಗೆ ಕಳೆದ ದಿನಗಳ ನೆನಪುಗಳನ್ನು ಹಂಚಿಕೊಂಡು ಶೃಂದ್ಧಾಂಜಲಿ ಸಂದೇಶ ಕಳುಹಿಸಿದ್ದಾರೆ. ಸಾಮಾನ್ಯ ಮಹಿಳೆಯಾಗಿದ್ದ ಸಾರಾ ಒಬಾಮ ಬಳಿಕ ಸ್ಥಳೀಯ ಶಾಲೆಯ ಡೋನಟ್ಸ್ ಹಾಗೂ ಬಿಸಿ ಗಂಜಿ ಒದಗಿಸುತ್ತಿದ್ದರು, ಆ ಕೆಲಸದಿಂದಲೇ ಅವರು ಜನಪ್ರೀಯವಾಗಿದ್ದರು ಹಾಗೂ 2008 ರಲ್ಲಿ ಸಾರಾ ಒಬಾಮ ಜಗತ್ತಿಗೆ ಪರಿಚಿತರಾಗಿದ್ದು ಮೊಮ್ಮಗ ಬರಾಕ್ ಒಬಾಮ್ ಅಮೆರಿಕದ ಮೊದಲ ಕಪ್ಪುವರ್ಣೀಯ ಅಧ್ಯಕ್ಷರಾದಾಗ ಹಿಂದೆ 2006 ರಲ್ಲಿಯೂ ಒಬಾಮ ಕೀನ್ಯಾಕೆ ಭೇಟಿ ನೀಡಿದ ನಂತರ ಅಜ್ಜಿ ಸಾರಾ ಮನೆ ಆಕರ್ಸಣೀಯ ಸ್ಥಳವಾಗಿತ್ತು.

ಅಜ್ಜಿ ಸಾವಿನ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಅವರೊಟ್ಟಿಗಿನ ನೆನಪು ಹಂಚಿಕೊಂಡ ಒಬಾಮ ಸಣ್ಣ ಬುಡಕಟ್ಟು ಜನಾಂಗದಲ್ಲಿ ಜನಿಸಿದ ಅಜ್ಜಿ ಶಿಕ್ಷಣ ಪಡೆಯದೇ ಸಣ್ಣ ವಯಸ್ಸಿಗೆ ತಮಗಿಂತ ಹಿರಿಯರನ್ನು ಮದುವೆಯಾಗಿ ವಿದ್ಯುತ್ ಸಂಪರ್ಕ್ ಇರದ ಮನೆಯಲ್ಲಿ ಬದುಕು ಸಾಗಿಸಿ ಎಂಟು ಮಕ್ಕಳ ಜೊತೆ ಆಡು ಕೋಳಿ ಸಾಕಿ ಬದುಕಿದರು ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸಾರಾ ಒಬಾಮ ಬರಾಕ್ ಒಬಾಮ ತಂದೆಯ ಮಲತಾಯಿ ಆದರೂ ಒಬಾಮಗೆ ಸಾರಾ ಮೇಲೆ ಅಪಾರ ಪ್ರೀತಿ ಅವರನ್ನು ಪ್ರೀತಿಯಿಂದ ಗ್ರ್ಯಾನ್ನಿ ಎಂದೇ ಕರೆಯುವ ಬರಾಕ್ ಒಬಾಮ ತಮ್ಮ ಅಧ್ಯಕ್ಷತೆಯ ಅವಧಿ ಕೊನೆಯಾದ ಬಳಿಕ 2018ರಲ್ಲಿ ಸಾರಾ ಮನೆಯ ಭೇಟಿ ಕೈ ಬಿಟ್ಟಿರಲಿಲ್ಲ.

error: Content is protected !!