ಮೂಗಿನಲ್ಲಿ ನಿಂಬೆ ರಸ: ಸಂಕೇಶ್ವರ್‌ ಅವರು ಯಾವಾಗಲೂ ಜವಾಬ್ದಾರಿಯಿಂದ ಮಾತನಾಡುತ್ತಾರೆ : ಪ್ರತಾಪ್ ಸಿಂಹ - BC Suddi
ಮೂಗಿನಲ್ಲಿ ನಿಂಬೆ ರಸ: ಸಂಕೇಶ್ವರ್‌ ಅವರು ಯಾವಾಗಲೂ ಜವಾಬ್ದಾರಿಯಿಂದ ಮಾತನಾಡುತ್ತಾರೆ : ಪ್ರತಾಪ್ ಸಿಂಹ

ಮೂಗಿನಲ್ಲಿ ನಿಂಬೆ ರಸ: ಸಂಕೇಶ್ವರ್‌ ಅವರು ಯಾವಾಗಲೂ ಜವಾಬ್ದಾರಿಯಿಂದ ಮಾತನಾಡುತ್ತಾರೆ : ಪ್ರತಾಪ್ ಸಿಂಹ

ಮೈಸೂರು: ಮೂಗಿನಲ್ಲಿ ನಿಂಬೆ ರಸದ ಎರಡು ಹನಿ ಹಾಕಿಕೊಂಡಲ್ಲಿ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಉದ್ಯಮಿ ವಿಜಯ್ ಸಂಕೇಶ್ವರ ಇತ್ತೀಚೆಗೆ ಹೇಳಿದ್ದರು. ಈ ಹೇಳಿಕೆಯನ್ನು ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.

‘ಉಸಿರಾಟ ತೊಂದರೆ ಇದ್ದರೆ ಮೂಗು ಬ್ಲಾಕ್ ಆಗಿದ್ದರೆ ನಿಂಬೆ ಹಣ್ಣಿನ ರಸವನ್ನು ಮೂಗಿಗೆ ಹಾಕಿಕೊಳ್ಳಿ ಎಂದಷ್ಟೆ ವಿಜಯ ಸಂಕೇಶ್ವರ್‌ ಹೇಳಿದ್ದಾರೆ. ಇದು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಎಂಬುದಾಗಿ ಅವರು ಎಲ್ಲೂ ಹೇಳಿಲ್ಲ. ಇದರಲ್ಲಿ ಹುಳುಕು ಹುಡುಕುವಂಥದ್ದು ಏನಿದೆ’ ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನೆ ಮಾಡಿದ್ದಾರೆ.

‘ವಿಜಯ ಸಂಕೇಶ್ವರ್‌ ಅವರು 50 ಸಾವಿರ ಮಂದಿಗೆ ಉದ್ಯೋಗ ನೀಡಿರುವ ಧೀಮಂತ ವ್ಯಕ್ತಿ. ದಾನಿ ಕೂಡ. ಅವರ ಬಗ್ಗೆ ಮಾತನಾಡಲು ಯೋಗ್ಯತೆ ಇರಬೇಕು. ಸಂಕೇಶ್ವರ್‌ ಅವರು ಯಾವಾಗಲೂ ಜವಾಬ್ದಾರಿಯಿಂದ ಮಾತನಾಡುತ್ತಾರೆ’ ಎಂದರು.

ಕೊರೊನಾ ಸೋಂಕು: ಜನರ ಜೀವ ತೆಗೆಯುತ್ತಿದೆ ಬಿಯು ನಂಬರ್