ಸ್ಯಾಂಡಲ್‌ವುಡ್‌ ನಟಿ ಅನು ಪ್ರಭಾಕರ್‌ಗೆ ಕೊರೊನಾ ದೃಢ - BC Suddi
ಸ್ಯಾಂಡಲ್‌ವುಡ್‌ ನಟಿ ಅನು ಪ್ರಭಾಕರ್‌ಗೆ ಕೊರೊನಾ ದೃಢ

ಸ್ಯಾಂಡಲ್‌ವುಡ್‌ ನಟಿ ಅನು ಪ್ರಭಾಕರ್‌ಗೆ ಕೊರೊನಾ ದೃಢ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಅನುಪ್ರಭಾಕರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವಿಚಾರವನ್ನು ಇನ್‌ಸ್ಟಾಗ್ರಾಂ ಮುಖಾಂತರ ಸ್ವತಃ ಅನುಪ್ರಭಾಕರ್ ಅವರು ಮಾಹಿತಿ ನೀಡಿದ್ದು, “ಎಲ್ಲ ರೀತಿಯ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ, ದುರದೃಷ್ಟವಶಾತ್‌ ನನಗೆ ಕೋವಿಡ್–19 ದೃಢಪಟ್ಟಿದೆ.

ನನ್ನ ವೈದ್ಯರು ಸೂಚಿಸಿರುವಂತೆ ಎಲ್ಲ ಔಷಧಿಗಳನ್ನು ನಾನು ತೆಗೆದುಕೊಳ್ಳುತ್ತಿದ್ದು, ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದೇನೆ. ಕುಟುಂಬದ ಇತರೆ ಸದಸ್ಯರಿಗೆ ಕೋವಿಡ್ ನೆಗೆಟಿವ್‌ ಬಂದಿದೆ. ನನ್ನ ಜೊತೆ ಸಂಪರ್ಕದಲ್ಲಿ ಇದ್ದವರು ತಕ್ಷಣವೇ ಕೋವಿಡ್ ಪರೀಕ್ಷೆಗೆ ಒಳಪಡಿ. ಎರಡನೇ ಅಲೆಯನ್ನು ನಿರ್ಲಕ್ಷಿಸಬೇಡಿ. ಮನೆಯಲ್ಲೇ ಇರಿ ಸುರಕ್ಷಿತವಾಗಿರಿ” ಎಂದು ತಿಳಿಸಿದ್ದಾರೆ.

ರೆಮ್‌ಡೆಸಿವಿರ್ ಲಸಿಕೆ ಹಾಗೂ ಅದರ ಕಚ್ಚಾವಸ್ತುಗಳ ಮೇಲಿನ ಆಮದು ಸುಂಕವನ್ನು ರದ್ದು: ಡಿವಿಎಸ್