ಆಟಗಾರ ಸಚಿನ್ ತೆಂಡೂಲ್ಕರ್ ಬೆನ್ನಲೇ ಯೂಸುಫ್ ಪಠಾಣ್‌ಗೂ ತಗಲಿದ ಸೋಂಕು..! - BC Suddi
ಆಟಗಾರ ಸಚಿನ್ ತೆಂಡೂಲ್ಕರ್ ಬೆನ್ನಲೇ ಯೂಸುಫ್ ಪಠಾಣ್‌ಗೂ ತಗಲಿದ ಸೋಂಕು..!

ಆಟಗಾರ ಸಚಿನ್ ತೆಂಡೂಲ್ಕರ್ ಬೆನ್ನಲೇ ಯೂಸುಫ್ ಪಠಾಣ್‌ಗೂ ತಗಲಿದ ಸೋಂಕು..!

ಮುಂಬೈ: ಭಾರತದಲ್ಲಿ ದಿನ ಕಳೆದಂತೆ ಕೊರೊನಾ ಸೋಂಕು ಹೆಚ್ಚುತ್ತಿದೆ. ಆದರೆ ಈ ನಡುವೆ ಆಟಗಾರರಿಗೂ ಸೋಂಕು ಕಂಡುಬರುತ್ತದೆ. ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಗೆ ಕೋವಿಡ್ ೧೯ ಸೋಂಕು ದೃಢವಾದ ಬೆನ್ನಲ್ಲೇ ಯೂಸುಫ್ ಪಠಾಣ್ ಗೂ ಕೋವಿಡ್ ಸೋಂಕು ದೃಢವಾಗಿದೆ. ಈ ಬಗ್ಗೆ ಸ್ವತಃ ಯೂಸುಫ್ ಹೇಳಿಕೊಂಡಿದ್ದು, ಇದರಿಂದ ವಾರದ ಹಿಂದಷ್ಟೇ ಟೂರ್ನಿಯಲ್ಲಿಆಡಿದ್ದ ಆಟಗಾರರಿಗೆ ಆತಂಕ ಆರಂಭವಾಗಿದೆ.

ಸಚಿನ್ ತೆಂಡೂಲ್ಕರ್, ಯೂಸುಫ್ ಅವರು ರೋಡ್ ಸೇಫ್ಟಿ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಯೂಸುಫ್ ಪಠಾಣ್, ನನಗೆ ಕೋವಿಡ್ ಪಾಸಿಟಿವ್ ಆಗಿರುವುದು ದೃಢವಾಗಿದೆ. ಕೆಲವು ಸಣ್ಣ ಪುಟ್ಟ ಲಕ್ಷಣಗಳಿವೆ. ನಾನು ಸದ್ಯ ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದೇನೆ ಎಂದು ಹೇಳಿದ್ದಾರೆ.

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ರಾಯ್ ಪುರದಲ್ಲಿ ನಡೆದಿತ್ತು. ಮಾರ್ಚ್ ೨೧ರಂದು ಇದರ ಫೈನಲ್ ನಡೆದಿದ್ದು, ಇಂಡಿಯಾ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ಆಡಿದ್ದವು. ಈ ಫೈನಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಯೂಸುಫ್ ಪಠಾಣ್ ಆಡಿದ್ದರು.

 

error: Content is protected !!