ಪ್ಲಾಸ್ಮಾ ದಾನಕ್ಕೆ ನಿರ್ಧರಿಸಿದ ಸಚಿನ್ ತೆಂಡೂಲ್ಕರ್ - BC Suddi
ಪ್ಲಾಸ್ಮಾ ದಾನಕ್ಕೆ ನಿರ್ಧರಿಸಿದ ಸಚಿನ್ ತೆಂಡೂಲ್ಕರ್

ಪ್ಲಾಸ್ಮಾ ದಾನಕ್ಕೆ ನಿರ್ಧರಿಸಿದ ಸಚಿನ್ ತೆಂಡೂಲ್ಕರ್

 ಈ ಹಿಂದೆ ಕೊರೊನಾ ಸೋಂಕು ದೃಢಪಟ್ಟು ಬಳಿಕ ಗುಣವಾದ ಸಚಿನ್ ತೆಂಡೂಲ್ಕರ್ ಈಗ ಕೊರೊನಾ ರೋಗಿಗಳಿಗೆ ತಮ್ಮ ಪ್ಲಾಸ್ಮಾವನ್ನು ದಾನ ಮಾಡಲು ಮತ್ತು ಇತರರಿಗೆ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳಲು ಸಹಾಯ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಸಚಿನ್, “ನಾನು ಪ್ಲಾಸ್ಮಾವನ್ನು ದಾನ ಮಾಡುತ್ತೇನೆ, ದೇಶವಾಸಿಗಳೂ ಇದನ್ನು ಮಾಡಬೇಕು ಎಂದು ಕೇಳಿಕೊಂಡಿರುವ ಅವರು, “ಎಲ್ಲರಿಗೂ ಧನ್ಯವಾದಗಳು, ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ. ಇದು ನನ್ನ ದಿನವನ್ನು ವಿಶೇಷಗೊಳಿಸಿದೆ. ನಾನು ನಿಜಕ್ಕೂ ತುಂಬಾ ಕೃತಜ್ಞನಾಗಿದ್ದೇನೆ. ನೋಡಿಕೊಳ್ಳಿ ಮತ್ತು ಸುರಕ್ಷಿತವಾಗಿರಿ” ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ರಸ್ತೆ ಸುರಕ್ಷತಾ ಸರಣಿಯಲ್ಲಿ ಆಡಿದ್ದು, ಈ ವೇಳೆ ಅವರು ವೈರಸ್‌ಗೆ ತುತ್ತಾಗಿದ್ದರು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತು ಸುಬ್ರಮಣ್ಯಂ ಬದ್ರಿನಾಥ್ ಅವರಂತಹ ಆಟಗಾರರಿಗೆ ಕೂಡ ಕೊರೊನಾ ಸೋಂಕು ದೃಢಪಟ್ಟಿದ್ದು ಅವರೆಲ್ಲರೂ ಈಗ ಚೇತರಿಸಿಕೊಂಡಿದ್ದಾರೆ.