ಬ್ರೇಕಿಂಗ್: ಸಚಿನ್ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು - BC Suddi
ಬ್ರೇಕಿಂಗ್: ಸಚಿನ್ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು

ಬ್ರೇಕಿಂಗ್: ಸಚಿನ್ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು

ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟರ್, ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಮಾರ್ಚ್‌ 27ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಈ ಸಂಬಂಧ ಸ್ವತಃ ಟ್ವೀಟ್ ಮಾಡಿರುವ ಲಿಟಲ್ ಮಾಸ್ಟರ್, “ನಿಮ್ಮ ಶುಭ ಹಾರೈಕೆ ಮತ್ತು ಪ್ರಾರ್ಥನೆಗೆ ಧನ್ಯವಾದಗಳು. ವೈದ್ಯರ ಸಲಹೆ ಮೇರೆಗೆ ಹಾಗೂ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವೇ ದಿನಗಳಲ್ಲಿ ಮನೆಗೆ ಮರಳುವ ಭರವಸೆ ಇದೆ. ಎಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ” ಎಂದು ತಿಳಿಸಿದ್ದಾರೆ.

ಜೊತೆಗೆ ಭಾರತ ಕ್ರಿಕೆಟ್‌ ತಂಡವು ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡು ಇಂದಿಗೆ 10 ವರ್ಷ ಕಳೆದಿದೆ. ಈ ಗಳಿಗೆಯನ್ನು ನೆನೆದಿರುವ ಸಚಿನ್ ತೆಂಡೂಲ್ಕರ್, “ವಿಶ್ವಕಪ್ ಗೆಲುವಿನ 10ನೇ ವಾರ್ಷಿಕೋತ್ಸವವಾದ ಇಂದು ಎಲ್ಲಾ ಭಾರತೀಯರು ಮತ್ತು ನನ್ನ ತಂಡದ ಆಟಗಾರರಿಗೆ ಶುಭ ಹಾರೈಸುವೆ” ಎಂದು ತಿಳಿಸಿದ್ದಾರೆ.

ತೈವಾನ್: ರೈಲು ಹಳಿ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 36 ಮಂದಿ ಮೃತ್ಯು, 75ಕ್ಕೂ ಅಧಿಕ ಮಂದಿಗೆ ಗಾಯ

error: Content is protected !!