ಏ.18 ರಂದು ಆರ್‌ಟಿಜಿಎಸ್ ಸೇವೆ 14 ಗಂಟೆಗಳ ಕಾಲ ಸ್ಥಗಿತ - ರಿಸರ್ವ್​ ಬ್ಯಾಂಕ್​ - BC Suddi
ಏ.18 ರಂದು ಆರ್‌ಟಿಜಿಎಸ್ ಸೇವೆ 14 ಗಂಟೆಗಳ ಕಾಲ ಸ್ಥಗಿತ – ರಿಸರ್ವ್​ ಬ್ಯಾಂಕ್​

ಏ.18 ರಂದು ಆರ್‌ಟಿಜಿಎಸ್ ಸೇವೆ 14 ಗಂಟೆಗಳ ಕಾಲ ಸ್ಥಗಿತ – ರಿಸರ್ವ್​ ಬ್ಯಾಂಕ್​

ನವದೆಹಲಿ: ಶನಿವಾರ ಮಧ್ಯ ರಾತ್ರಿ 12 ಗಂಟೆಯಿಂದ ಏಪ್ರಿಲ್ 18 ರ ರವಿವಾರ ಮಧ್ಯಾಹ್ನ 2 ಗಂಟೆವರೆಗೆ 14 ಗಂಟೆಗಳ ಕಾಲ ಇಡೀ ದೇಶಾದ್ಯಂತ ಆರ್‌ಟಿಜಿಎಸ್​ ಸೇವೆ ಇರುವುದಿಲ್ಲ ಎಂದು ರಿಸರ್ವ್​ ಬ್ಯಾಂಕ್​ ಹೇಳಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರಕಟಣೆಯ ಪ್ರಕಾರ, ಏಪ್ರಿಲ್ 18 ರಂದು ಇಡೀ ದೇಶಾದ್ಯಂತ 14 ಗಂಟೆಗಳ ಕಾಲ ಆರ್‌ಟಿಜಿಎಸ್ ಸೇವೆ ಇರುವುದಿಲ್ಲ.
ಏಪ್ರಿಲ್ 17 ರ ರಾತ್ರಿಯ ವ್ಯವಹಾರ ಆದ ಬಳಿಕ ಏಪ್ರಿಲ್ 17 ರಾತ್ರಿ 12 ಗಂಟೆಗೆ ಈ ಕೆಲಸ ಪ್ರಾರಂಭವಾಗಿ ಮರುದಿನ ಅಂದರೆ ಏಪ್ರಿಲ್ 18 ರ ಮಧ್ಯಾಹ್ನ 2 ಗಂಟೆವರೆಗೆ ಈ ಕೆಲಸ ನಡೆಯಲಿದ್ದು, ಈ ಸಂದರ್ಭದಲ್ಲಿ ಆರ್‌ಟಿಜಿಎಸ್ ತಂತ್ರಾಂಶವನ್ನು ಉನ್ನತೀಕರಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ

“ಸದಸ್ಯ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ತಕ್ಕಂತೆ ಪಾವತಿ ಕಾರ್ಯಾಚರಣೆಗಳನ್ನು ಯೋಜಿಸುವಂತೆ ತಿಳಿಸಬಹುದು. ಈ ಅವಧಿಯಲ್ಲಿ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) ವ್ಯವಸ್ಥೆಯು ಎಂದಿನಂತೆ ಕಾರ್ಯನಿರ್ವಹಿಸುತ್ತಲೇ ಇರುತ್ತದೆ” ಎಂದು ಆರ್‌ಬಿಐ ತಿಳಿಸಿದೆ.

ಹಬ್ಬದ ಶಾಪಿಂಗ್‌ನಲ್ಲಿ ದಂಪತಿ ಬಿಜಿ: ಕಾರಿನಲ್ಲಿ ಸಾವು-ಬದುಕಿನ ಮಧ್ಯೆ ಮಗುವಿನ ಹೋರಾಟ