ಅಂತಾರಾಜ್ಯ ಪ್ರಯಾಣಕ್ಕೆ ಆರ್.ಟಿ-ಪಿಸಿಆರ್ ಕಡ್ಡಾಯವಲ್ಲ: ಹೊಸ ಮಾರ್ಗಸೂಚಿ - BC Suddi
ಅಂತಾರಾಜ್ಯ ಪ್ರಯಾಣಕ್ಕೆ ಆರ್.ಟಿ-ಪಿಸಿಆರ್ ಕಡ್ಡಾಯವಲ್ಲ: ಹೊಸ ಮಾರ್ಗಸೂಚಿ

ಅಂತಾರಾಜ್ಯ ಪ್ರಯಾಣಕ್ಕೆ ಆರ್.ಟಿ-ಪಿಸಿಆರ್ ಕಡ್ಡಾಯವಲ್ಲ: ಹೊಸ ಮಾರ್ಗಸೂಚಿ

ನವದೆಹಲಿ: ಅಂತಾರಾಜ್ಯ ಪ್ರಯಾಣಕ್ಕೆ ಆರ್.ಟಿ-ಪಿಸಿಆರ್ ಕಡ್ಡಾಯವಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಹೇಳಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವುದರಿಂದ ಆರ್.ಟಿ-ಪಿಸಿಆರ್ ಪರೀಕ್ಷೆ ಕಷ್ಟಸಾಧ್ಯವಾಗಿದೆ. ಅದಕ್ಕಾಗಿ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.

ನೂತನ ಮಾರ್ಗಸೂಚಿಯಲ್ಲಿ ಏನಿದೆ?
ಐಸಿಎಂಆರ್​ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿ ಅನ್ವಯ ನಿಯಮಗಳು ಹೀಗಿವೆ:

1. ಒಮ್ಮೆ ಒಬ್ಬ ವ್ಯಕ್ತಿಗೆ ಆ್ಯಂಟಿಜೆನ್ ರ್ಯಾಪಿಡ್​ ಟೆಸ್ಟ್ ಅಥವಾ ಆರ್​ಟಿಪಿಸಿಆರ್​ ಟೆಸ್ಟ್ ಮಾಡಿಸಿ ಅದರಲ್ಲಿ ಕೊವಿಡ್ 19 ಪಾಸಿಟಿವ್​ ಎಂದು ವರದಿ ಬಂದರೆ ಮತ್ತೊಮ್ಮೆ ಆರ್​ಟಿ-ಪಿಸಿಆರ್ ತಪಾಸಣೆಗೆ ಒಳಗಾಗುವ ಅಗತ್ಯವಿಲ್ಲ.

2.ಕೊವಿಡ್ 19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಚೇತರಿಸಿಕೊಂಡು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಯಮದ ಅನುಸಾರ ಡಿಸ್​ಚಾರ್ಜ್ ಆಗುವ ಹೊತ್ತಲ್ಲಿ ಅವರಿಗೆ ಮತ್ತೆ ಆರ್​ಟಿ-ಪಿಸಿಆರ್​ ಟೆಸ್ಟ್ ಮಾಡಿಸಬೇಕಿಲ್ಲ.

3. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಯಾರಾದರೂ ಪ್ರಯಾಣ ಮಾಡಬೇಕು ಅಂತಿದ್ದು, ಅವರಲ್ಲಿ ಕೊರೊನಾದ ಯಾವುದೇ ಲಕ್ಷಣ ಇಲ್ಲದಿದ್ದರೆ ಅಂಥವರು ಆರ್​ಟಿ-ಪಿಸಿಆರ್ ತಪಾಸಣೆಗೆ ಒಳಗಾಗುವುದು ಬೇಡ. ಆರ್​ಎಟಿ ತಪಾಸಣೆ ಸಾಕು.

4. ಜ್ವರ, ನೆಗಡಿ, ಕೆಮ್ಮಿನಿಂತ ಲಕ್ಷಣ ಇರುವವರು ಸಾಧ್ಯವಾದಷ್ಟು ಮಟ್ಟಿಗೆ ಪ್ರಯಾಣವನ್ನು ಕಡಿಮೆ ಮಾಡಬೇಕು. ಅನಿವಾರ್ಯ ಇಲ್ಲ ಎಂದರೆ ಒಂದುಕಡೆಯಿಂದ ಇನ್ನೊಂದು ಕಡೆಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಅಂತಾರಾಜ್ಯ ಪ್ರಯಾಣವೂ ಬೇಡ. ಅದಕ್ಕಾಗಿ ಆರ್​ಟಿ-ಪಿಸಿಆರ್ ಟೆಸ್ಟ್​ ಮಾಡಿಸುವುದು ಬೇಡ.

5. ರಾಜ್ಯಸರ್ಕಾರಗಳು ಸಂಚಾರಿ ವ್ಯವಸ್ಥೆಯ ಮೂಲಕ ಉತ್ತಮ ಗುಣಮಟ್ಟದ ಆರ್​ಟಿ-ಪಿಸಿಆರ್​ ಟೆಸ್ಟ್​ನ್ನು ಹೆಚ್ಚಿಸಬೇಕು.