ಕೊರೊನಾ ಕಂಟಕ : ರಾಬರ್ಟ್ ವಿಜಯ ಯಾತ್ರೆ ಮುಂದೂಡಿಕೆ - BC Suddi
ಕೊರೊನಾ ಕಂಟಕ : ರಾಬರ್ಟ್ ವಿಜಯ ಯಾತ್ರೆ ಮುಂದೂಡಿಕೆ

ಕೊರೊನಾ ಕಂಟಕ : ರಾಬರ್ಟ್ ವಿಜಯ ಯಾತ್ರೆ ಮುಂದೂಡಿಕೆ

ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬಾಕ್ಸ್ ಆಫೀಸ್ ಸುಲ್ತಾನ್ ದಚ್ಚು ದರ್ಶನ್ ನಾಯಕರಾಗಿರುವ ರಾಬರ್ಟ್ ಚಿತ್ರ ಹಿಟ್ ಲಿಸ್ಟ್ ಸೇರಿರೋದು ಸುದ್ದಿ ಎಲ್ಲರಿಗೂ ಗೊತ್ತು.

ಈ ಸಂಭ್ರಮವನ್ನು ಅಭಿಮಾನಿಗಳ ಜೊತೆ ಆಚರಿಸಲು ಚಿತ್ರತಂಡ ವಿಜಯ ಯಾತ್ರೆ ಹೊರಡಲು ಅಣಿಯಾಗಿತ್ತು. ಉತ್ತರ ಕರ್ನಾಟಕ ಭಾಗದಿಂದ 29 ರಿಂದ ವಿಜಯ ಯಾತ್ರೆ ನಡೆಸಲು ಮುಂದಾಗಿತ್ತು. ಆದರೆ ಕೊರೊನಾ 2ಡನೇ ಅಲೆ ಅಬ್ಬರದಿಂದಾಗಿ ಈಗ ಯಾತ್ರೆಯನ್ನ ಮುಂದೂಡಲಾಗಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ರಾಬರ್ಟ್ ತಂಡ ಸದ್ಯಕ್ಕೆ ವಿಜಯ ಯಾತ್ರೆಯನ್ನು ಕೈಬಿಟ್ಟಿದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ತರುಣ್ ಸುಧೀರ್, ಸದ್ಯಕ್ಕೆ ವಿಜಯ ಯಾತ್ರೆಯನ್ನು ಮುಂದಕ್ಕೆ ಹಾಕಿದ್ದೇವೆ. ಸರ್ಕಾರದ ಮಾರ್ಗಸೂಚಿ ಪಾಲಿಸುವುದು ನಮ್ಮ ಕರ್ತವ್ಯ ಎಂದಿದ್ದಾರೆ.

ದೇಶದಲ್ಲಿ ಕೊರೊನಾ ರಣಕೇಕೆ : 24 ಗಂಟೆಯಲ್ಲಿ 312 ಮಂದಿ ಸಾವು

error: Content is protected !!