ಚುನಾವಣಾ ಫಲಿತಾಂಶ ನಂತರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಲಾಗಿದೆ : ಲಕ್ಷ್ಮಣ ಸವದಿ - BC Suddi
ಚುನಾವಣಾ ಫಲಿತಾಂಶ ನಂತರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಲಾಗಿದೆ : ಲಕ್ಷ್ಮಣ ಸವದಿ

ಚುನಾವಣಾ ಫಲಿತಾಂಶ ನಂತರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಲಾಗಿದೆ : ಲಕ್ಷ್ಮಣ ಸವದಿ

ಕಲಬುರಗಿ: ಒಂದು ಬಾಕಿ ಇರುವ ವೇತನ ಹೆಚ್ಚಳವನ್ನೂ ಸಹ ಮೇ 4ರ ನಂತರ ಈಡೇರಿಕೆಗೆ ಮನವರಿಕೆ ಮಾಡಿ ಕೊಡಲಾಗಿದೆ. ಸಾರಿಗೆ ನೌಕರರ ಎಂಟು ಬೇಡಿಕೆಯನ್ನು ಈಡೇರಿಸಿದ್ದವೆ  ಎಂದು ಉಪಮುಖ್ಯಮಂತ್ರಿಯಾಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಬಸವಕಲ್ಯಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ವಿಮಾನದ ಮೂಲಕ ಬಂದಿಳಿದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅನಾವಶ್ಯಕವಾಗಿ ಸರ್ಕಾರ ಮತ್ತು ನೌಕರರ ಮಧ್ಯೆ ಗೊಂದಲ ಸೃಷ್ಟಿ ಮಾಡುವುದಕ್ಕೆ ಮುಂದಾಗಿದ್ದಾರೆ. ಹೀಗಾಗಿ  ಚುನಾವಣಾ ಫಲಿತಾಂಶ ನಂತರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಲಾಗಿದೆ. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬೇಡಿಕೆ ಈಡೇರಿಸಲಿಕ್ಕಾಗುತ್ತಿಲ್ಲ ಎಂದು ವಿವರಣೆ ನೀಡಿದರು.

ಕೋವಿಡ್-19 ಸಂಧರ್ಭದಲ್ಲಿ ಬಡವರಿಗೆ ಮಧ್ಯಮ ವರ್ಗದವರಿಗೆ ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರೆ ಆಗುತ್ತದೆ ಎಂಬುದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕೆಂದರು. ಕೋಡಿಹಳ್ಳಿ ಚಂದ್ರಶೇಖರ್ ಮೇಧಾವಿ, ಬಹಳ ಬುದ್ದಿವಂತರು. ಅವರ ಬುದ್ದಿ ನಮ್ಮ ಸರ್ಕಾರಕ್ಕೆ ಇಲ್ಲಾ ಅಂತಾ ಅಂದುಕೊಳ್ಳತ್ತೇನೆ. ಒಂದು ವೇಳೆ ಬಸ್ ಸಂಚಾರ ಬಂದ್ ಮಾಡಿದರೆ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನ ತಂದು ಓಡಿಸುತ್ತೇವೆ ಎಂದು ಸಚಿವ ಸವದಿ ಸ್ಪಷ್ಟಪಡಿಸಿದರು.

ಭಾರತದ ಮುಖ್ಯ ನ್ಯಾಯಾಧೀಶರಾಗಿ ಜಸ್ಟಿಸ್ ಎನ್. ವಿ. ರಮಣ ನೇಮಕ 

error: Content is protected !!