ರೆಮ್‌ಡೆಸಿವಿರ್ ಲಸಿಕೆ ಹಾಗೂ ಅದರ ಕಚ್ಚಾವಸ್ತುಗಳ ಮೇಲಿನ ಆಮದು ಸುಂಕವನ್ನು ರದ್ದು: ಡಿವಿಎಸ್ - BC Suddi
ರೆಮ್‌ಡೆಸಿವಿರ್ ಲಸಿಕೆ ಹಾಗೂ ಅದರ ಕಚ್ಚಾವಸ್ತುಗಳ ಮೇಲಿನ ಆಮದು ಸುಂಕವನ್ನು ರದ್ದು: ಡಿವಿಎಸ್

ರೆಮ್‌ಡೆಸಿವಿರ್ ಲಸಿಕೆ ಹಾಗೂ ಅದರ ಕಚ್ಚಾವಸ್ತುಗಳ ಮೇಲಿನ ಆಮದು ಸುಂಕವನ್ನು ರದ್ದು: ಡಿವಿಎಸ್

ನವದೆಹಲಿ: ರೆಮ್‌ಡೆಸಿವಿರ್ ಲಸಿಕೆ ಹಾಗೂ ಅದರ ಕಚ್ಚಾವಸ್ತುಗಳ ಮೇಲಿನ ಆಮದು ಸುಂಕವನ್ನು ರದ್ದುಗೊಳಿಸಿರುವ ಬಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, “ಫಾರ್ಮಸುಟಿಕಲ್ಸ್ ಇಲಾಖೆಯ ಶಿಫಾರಸ್ಸಿನ ಮೇರೆಗೆ ತಕ್ಷಣದ ಅಗತ್ಯವನ್ನು ಪರಿಗಣಿಸಿ ಕಂದಾಯ ಇಲಾಖೆ ರೆಮ್ ಡೆಸಿವಿರ್ ಮತ್ತು ಅದರ ಎಪಿಐ/ ಕೆಎಸ್‌ಎಂ ಮೇಲಿನ ಸೀಮಾ ಸುಂಕವನ್ನು ಮನ್ನಾ ಮಾಡಿದೆ. ಈ ಕ್ರಮ ದೇಶಿಯವಾಗಿ ರೆಮ್‌ಡೆಸಿವಿರ್ ಇಂಜಕ್ಷನ್ ಲಭ್ಯತೆ ಮತ್ತಷ್ಟು ಹೆಚ್ಚಿಸಲಿದೆ” ಎಂದು ಹೇಳಿದ್ದಾರೆ.

ಮಹಾರಾಷ್ಟ್ರ: ಆಸ್ಪತ್ರೆಯ ಹೊರಗೆ ಆಮ್ಲಜನಕದ ಟ್ಯಾಂಕರ್ ಸೋರಿಕೆ: 11 ಮಂದಿ ಸಾವು