ತಗ್ಗಿದ ತೈಲ ದರ : ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು? - BC Suddi
ತಗ್ಗಿದ ತೈಲ ದರ : ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?

ತಗ್ಗಿದ ತೈಲ ದರ : ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಕ್ರಮವಾಗಿ ಲೀಟರ್ ಗೆ 16 ಪೈಸೆ ಮತ್ತು 15 ಪೈಸೆ ಇಳಿಕೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಈಗ ಪೆಟ್ರೋಲ್ ಲೀಟರ್ ಗೆ 90.40 ರೂ.ಗೆ ಮಾರಾಟ ಆಗುತ್ತಿದೆ. ಡೀಸೆಲ್ ಲೀಟರ್ ಗೆ 80.73 ರೂ.ಯಲ್ಲಿ ಖರೀದಿಯಾಗುತ್ತದೆ.

ಕಚ್ಚಾ ತೈಲ ಬ್ಯಾರೆಲ್ ಗೆ 65 ಡಾಲರ್ ಗಿಂತ ಕಡಿಮೆ ಆಗಿದ್ದರಿಂದ ಕಳೆದ ಹದಿನೈದು ದಿನಗಳಿಂದ ಮೃದುವಾಗಿ ಸಾಗುತ್ತಿದ್ದ ಬೆಲೆಯ ಲಾಭವನ್ನು ಗ್ರಾಹಕರಿಗೆ ವರ್ಗಾವಣೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರಿಗೆ 16 ಪೈಸೆ ಮತ್ತು ಡೀಸೆಲ್ ದರ 15 ಪೈಸೆ ಇಳಿಕೆ ಆಗಿದ್ದು, ಕ್ರಮವಾಗಿ ₹ 93.43 ಮತ್ತು ₹ 85.60ರಂತೆ ಮಾರಾಟವಾಗಿವೆ.

ಕೋಲ್ಕತ್ತಾ: ನಾಲ್ಕು ಹಂತದ ಚುನಾವಣೆ ಒಂದೇ ದಿನ ನಡೆಸಲು ಸಿಎಂ ಮಮತಾ ಬ್ಯಾನರ್ಜಿ ಒತ್ತಾಯ..!