ಬೆಂಗಳೂರು: ಐಪಿಎಲ್ 14ನೇ ಆವೃತ್ತಿಗೆ ಕ್ಷಣಗಣಗೆ ಆರಂಭವಾದ ಬೆನ್ನಲ್ಲೆ ಕೊರೊನಾ ಆಟಗಾರರ ಕನಸ್ಸಿಗೆ ಕೊಳ್ಳಿ ಇಡುತ್ತಿದೆ. ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಕೋವಿಡ್ ಕಂಟಕವಾಗಿದೆ. ಏಪ್ರಿಲ್ 09ರಿಂದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಆರಂಭವಾಗಲಿದೆ.
ಹೀಗಿರುವಾಗಲೇ ವಿರಾಟ್ ಕೊಹ್ಲಿ ಪಡೆಗೆ ಆರಂಭಿಕ ವಿಘ್ನ ಎದುರಾಗಿದೆ. ಆರ್ ಸಿಬಿ ಆಟಗಾರ ದೇವದತ್ ಪಡಿಕ್ಕಲ್ ಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಐಪಿಎಲ್ ಗೆ ಕೇವಲ ಐದು ದಿನಗಳು ಬಾಕಿ ಇರುವಾಗಲೇ ಸ್ಫೋಟಕ ಬ್ಯಾಟ್ಸಮನ್ ಪಡಿಕ್ಕಲ್ ಅವರಿಗೆ ಕೋವಿಡ್ ದೃಢಪಟ್ಟಿರುವುದು ಆರ್ ಸಿಬಿ ತಂಡದಲ್ಲಿ ಆತಂಕ ಮೂಡಿಸಿದೆ.
ಪಡಿಕ್ಕಲ್ ಅವರಿಗೆ ಸೋಂಕು ಇರುವುದು ಭಾನುವಾರ ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಆರ್ ಸಿಬಿ ಮತ್ತು ಮುಂಬೈ ನಡುವೆ ನಡೆಯುವ ಐಪಿಎಲ್ ನ ಮೊದಲ ಪಂದ್ಯಕ್ಕೆ ಪಡಿಕ್ಕಲ್ ಅವರು ಗೈರಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಡಿಕ್ಕಲ್ ಅವರನ್ನು ಉಳಿದ ಆಟಗಾರರಿಂದ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.