ರಮ್ಯಾ ಸಿನಿಮಾಕ್ಕೆ ಬರುತ್ತಾರಾ? ರಾಜಕೀಯಕ್ಕೆ ಬರುತ್ತಾರಾ? ಮದುವೆ ಆಗುತ್ತಾರಾ?: ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೂ ಒಂದೇ ವೇಳೆ ಉತ್ತರಿಸಿದ ರಮ್ಯಾ ..! - BC Suddi
ರಮ್ಯಾ ಸಿನಿಮಾಕ್ಕೆ ಬರುತ್ತಾರಾ? ರಾಜಕೀಯಕ್ಕೆ ಬರುತ್ತಾರಾ? ಮದುವೆ ಆಗುತ್ತಾರಾ?:  ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೂ ಒಂದೇ ವೇಳೆ ಉತ್ತರಿಸಿದ ರಮ್ಯಾ ..!

ರಮ್ಯಾ ಸಿನಿಮಾಕ್ಕೆ ಬರುತ್ತಾರಾ? ರಾಜಕೀಯಕ್ಕೆ ಬರುತ್ತಾರಾ? ಮದುವೆ ಆಗುತ್ತಾರಾ?: ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೂ ಒಂದೇ ವೇಳೆ ಉತ್ತರಿಸಿದ ರಮ್ಯಾ ..!

ಬೆಂಗಳೂರು: ಮೋಹಕ ತಾರೆ ರಮ್ಯಾ ಮತ್ತೆ ಸಿನಿಮಾದಲ್ಲಿ ನಟಿಸುತ್ತಾರಾ ಎಂಬ ಅಭಿಮಾನಗಳ ಪ್ರಶ್ನೆಗೆ ಸಿನಿಮಾ ಎನ್ನುವುದು ಮುಗಿದು ಹೋದ ಅಧ್ಯಾಯ ಎಂದು ಉತ್ತರಿಸಿದ ಅವರು ಸದ್ಯಕ್ಕೆ ಸಿನಿಮಾಕ್ಕೆ ಬರುವ ಯೋಚನೆ ಇಲ್ಲ ಎನ್ನುವುದನ್ನ ಸ್ಪಷ್ಟಪಡಿಸಿದ್ದಾರೆ.

ಇನ್ಸ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ಮಾತುಕಥೆ ನಡೆಸಿದ ರಮ್ಯಾ, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸಿನಿಮಾಗೆ ಮತ್ತೆ ಯಾವಾಗ ವಾಪಸ್‌ ಆಗ್ತೀರಾ ಎಂಬ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿರುವ ರಮ್ಯಾ, “ಸಿನಿಮಾ ಜರ್ನಿ ಯಾವತ್ತೋ ಮುಗಿದು ಹೋಗಿದೆ” ಎಂದು ಹೇಳುವ ಮೂಲಕ ಮತ್ತೆ ಸಿನಿಮಾಕ್ಕೆ ಬರುವ ಯೋಚನೆಯಿಲ್ಲ ಎಂದಿದ್ದಾರೆ.

ಇನ್ನು ನೀವು ಸಕ್ರಿಯ ರಾಜಕಾರಣಕ್ಕೆ ವಾಪಸ್‌ ಬರಲ್ವಾ ಎಂದು ಪ್ರಶ್ನಿಸಿರುವ ಅಭಿಮಾನಿಯೊಬ್ಬರಿಗೆ, “ಇಲ್ಲ, ನನ್ನ ಸಮಯ ಮುಗಿದಿದೆ” ಎಂದು ಉತ್ತರಿಸಿದ್ದಾರೆ. ಸಿನಿಮಾ ಮತ್ತು ರಾಜಕೀಯಯೊಂದಿಗೆ ಅನೇಕರು ರಮ್ಯಾ ಮದುವೆ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದ್ದು, ನೀವು ಮದುವೆ ಆಗಿದ್ದೀರಾ..?, ಡೇಟಿಂಗ್‌ ಮಾಡ್ತಿದ್ದೀರಾ..? ನಿಮಗೆ ಬಾಯ್‌ಫ್ರೆಂಡ್‌ ಇದ್ದಾರಾ..? ಎಂಬ ಪ್ರಶ್ನೆಗಳಿಗೆಲ್ಲ “ಇಲ್ಲ” ಎಂದಿದ್ದಾರೆ.

ನಿಮ್ಮಲ್ಲಿ ನೀವು ದ್ವೇಷಿಸುವ ಅಂಶವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, “ನನ್ನ ಭಾವನೆಗಳನ್ನು ನಿಯಂತ್ರಿಸುವಲ್ಲಿಅಸಮರ್ಥತೆ” ಎಂದು ಉತ್ತರಿಸಿದ್ದಾರೆ. ಇನ್ನು ಅಭಿಮಾನಿಯೊಬ್ಬ “ನೀವು ರಕ್ಷಿತ್‌ ಶೆಟ್ಟಿನಾ ಮದುವೆ ಆಗಿ” ಎಂದಿದ್ದು, ಇದಕ್ಕೆ ಉತ್ತರಿಸಿದ ರಮ್ಯಾ, ರಕ್ಷಿತ್‌ ಶೆಟ್ಟಿ ಅವರ ಇನ್ಸ್ಟಾ ಖಾತೆಯನ್ನು ಟ್ವೀಟ್‌ ಮಾಡಿ ನಗುವ ಎಮೋಜಿ ಹಾಕಿದ್ದಾರೆ.

ರಮ್ಯಾ ಸಿನಿಮಾಕ್ಕೆ ಬರುತ್ತಾರಾ? ರಾಜಕೀಯಕ್ಕೆ ಬರುತ್ತಾರಾ? ಮದುವೆ ಆಗುತ್ತಾರಾ? ಎಂಬ ಎಲ್ಲ ಪ್ರಶ್ನೆಗಳಿಗೂ ಒಂದೇ ವೇಳೆ ರಮ್ಯಾ ಉತ್ತರಿಸಿದ್ದಾರೆ.

ಚೆನ್ನೈ: ಹೈದ್ರಾಬಾದ್ ಹಾಗೂ ಡೆಲ್ಲಿ ನಡುವಿನ ಪಂದ್ಯ ಟೈ ಗೊಂಡಿದ್ದು, ಸೂಪರ್ ಓವರ್ ನಲ್ಲಿ ಗೆದ್ದು ಬೀಗಿದ ಡೆಲ್ಲಿ