ಬೆಂಗಳೂರು : ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಪೊಲೀಸರಿಗೆ ದೂರು ನೀಡುವ ಮೊದಲೇ ಕೆಲ ವಿಡಿಯೋಗಳನ್ನು ಯುಟ್ಯೂಬ್ ಗೆ ಅಪ್ ಲೋಡ್ ಮಾಡಲಾಗಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಮಾಧ್ಯಮಗಳಿಗೆ ವಿಡಿಯೋ ಹಂಚಿಕೊಳ್ಳುವುದಕ್ಕೆ ಮೂರು ಗಂಟೆ ಮೊದಲೇ ಕೆಲ ವಿಡಿಯೋಗಳನ್ನು ಅಪ್ ಲೋಡ್ ಮಾಡಲಾಗಿತ್ತು. ಇದೊಂದು ದೊಡ್ಡ ಸಂಶಯಕ್ಕೆ ಎಡಿಮಾಡಿ ಕೊಟ್ಟಿದೆ ಎನ್ನಾಲಾಗುತ್ತಿದೆ.

ದಿನೇಶ್ ಕಲ್ಲಳ್ಳಿ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ದೂರು ನೀಡಿ, ಬಳಿಕ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ವಿಡಿಯೋ ಅಪ್ ಲೋಡ್ ಮಾಡಿರುವ ಕುರಿತು ಇಂಟರ್ ನೆಟ್ ಪ್ರೊಟೋಕಾಲ್ ನಿಂದ ತಿಳಿದು ಬಂದಿದೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಮತ್ತು ಸಂತ್ರಸ್ತೆ ಕಾಮಕಾಂಡದಲ್ಲಿ ತೊಡಗಿರುವ ವಿಡಿಯೊಗಳ ಪೈಕಿ ಕೆಲವು ಬೆಂಗಳೂರಿನ ಹೋಟೆಲ್, ಅಪಾರ್ಟ್ ಮೆಂಟ್ ಗಳಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ವಿಚಾರವನ್ನು ಇನ್ನು ಪೊಲೀಸರು ಈ ಬಗ್ಗೆಮಾಹಿತಿ ನೀಡಿಲ್ಲ.