ರಾಮನವಮಿ ಶುಭಾಶಯ ಕೋರಿದ ಪ್ರಧಾನಿ:ಕೊರೊನಾ ನಿಯಮ ಪಾಲಿಸುವಂತೆ ನಮೋ ಮನವಿ - BC Suddi
ರಾಮನವಮಿ ಶುಭಾಶಯ ಕೋರಿದ ಪ್ರಧಾನಿ:ಕೊರೊನಾ ನಿಯಮ ಪಾಲಿಸುವಂತೆ ನಮೋ ಮನವಿ

ರಾಮನವಮಿ ಶುಭಾಶಯ ಕೋರಿದ ಪ್ರಧಾನಿ:ಕೊರೊನಾ ನಿಯಮ ಪಾಲಿಸುವಂತೆ ನಮೋ ಮನವಿ

ನವದೆಹಲಿ : ಇಂದು ದೇಶದಾದ್ಯಂತ ರಾಮನವಮಿಯನ್ನು ಆಚರಿಸುತ್ತಿದ್ದಾರೆ. ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜನ್ಮದಿನವಾದ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯನ್ನು ದೇಶದೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಸಂಭ್ರಮಿಸುತ್ತಿದ್ದಾರೆ. ಕೊರೊನಾ ವಿಷಮ ಪರಿಸ್ಥಿತಿಯಲ್ಲಿಯೂ ರಾಮನವಮಿ ಶುಭಾಶಯ ಕೋರಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಇಂದು ರಾಮ ನವಮಿ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಸಂದೇಶದಂತೆ ಅವರ ನಡವಳಿಕೆಯನ್ನು ಅನುಸರಿಸುವುದಾಗಿದೆ. ಈ ಕೊರೊನಾ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಸೋಂಕು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿದೆ. ‘ದವಾಯಿ ಭೀ, ಕಡಾಯಿ ಭಿ’ (ಔಷಧಿಯೂ ಇದೆ, ಎಚ್ಚರಿಕೆಯೂ ಇದೆ) ಮಂತ್ರವನ್ನು ಸ್ಮರಿಸಿಕೊಳ್ಳಿ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದ ಮೋದಿಯವರು, ದೇಶದಲ್ಲಿ ಮತ್ತೇ ಲಾಕ್ ಡೌನ್ ಮಾಡುವುದಿಲ್ಲ ಎಂದು ಘೋಷಿಸಿದರು. ಇನ್ನು ಲಾಕ್ ಡೌನ್ ಕೊನೆಯ ಅಸ್ತ್ರವಾಗಬೇಕು. ಸೋಂಕು ನಿಗ್ರಹಕ್ಕೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ ಎಂದು ಹೇಳಿದ್ದರು. ದೇಶದಲ್ಲಿ ನಡೆಯುತ್ತಿರುವ ಯಾವುದೇ ಕೆಲಸ ಹಾಗೂ ಕಾಮಗಾರಿಗಳು ನಿಲ್ಲುವುದಿಲ್ಲ. ಕಾರ್ಮಿಕರು ಯಾವುದೇ ಕಾರಣಕ್ಕೂ ವಲಸೆ ಹೋಗಬೇಡಿ. ಕೊರೊನಾ ನಿಯಂತ್ರಿಸಲು ಕೈಜೋಡಿಸಿ ಎಂದು ಮನವಿ ಮಾಡಿದ್ದರು.

ಸಿಎಂ ಆರೋಗ್ಯ ಹೇಗಿದೆ ಎಂದ ಡಿಕೆಶಿ :ಪರಸ್ಪರ ಆರೋಗ್ಯ ವಿಚಾರಿಸಿಕೊಂಡ ಹಾಲಿ-ಮಾಜಿ ಸಿಎಂಗಳು