ರಂಜಾನ್ ಹಬ್ಬ : ಹೊಸ ಗೈಡ್ ಲೈನ್ಸ್ ಪ್ರಕಟಿಸಿದ ಸರ್ಕಾರ - BC Suddi
ರಂಜಾನ್ ಹಬ್ಬ : ಹೊಸ ಗೈಡ್ ಲೈನ್ಸ್ ಪ್ರಕಟಿಸಿದ ಸರ್ಕಾರ

ರಂಜಾನ್ ಹಬ್ಬ : ಹೊಸ ಗೈಡ್ ಲೈನ್ಸ್ ಪ್ರಕಟಿಸಿದ ಸರ್ಕಾರ

ಬೆಂಗಳೂರು: ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಇಂದಿನಿಂದ ಆರಂಭವಾಗಿದೆ. ಒಂದು ತಿಂಗಳ ಕಾಲ ಈ ಆಚರಣೆ ನಡೆಯಲಿದ್ದು, ಕೋವಿಡ್ ಕಾರಣದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಕಂಟೈನ್ ಮೆಂಟ್ ಜೋನ್ ನಲ್ಲಿರುವ ಮಸೀದಿಗಳನ್ನು ತೆರೆಯುವಂತಿಲ್ಲ. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿಲ್ಲ. ಮಾಸ್ಕ್ ಧರಿಸುವುದು ಕಡ್ಡಾಯ, ಎರಡು ಮೀಟರ್ ನಷ್ಟು ಅಂತರ ಕಾಪಾಡಬೇಕು.

ಸಾರ್ವಜನಿಕವಾಗಿ ಇಫ್ತಾರ್ ಕೂಟಕ್ಕೆ ಬ್ರೇಕ್, ಮನೆಯಲ್ಲಿಯೇ ಆಯೋಜಿಸಬಹುದು. ಪ್ರಾರ್ಥನೆಗೆ ಸ್ವಂತ ಜಮಖಾನ ಬಳಸಬೇಕು ಎಂಬಿತ್ಯಾದಿ ನಿಯಮಗಳನ್ನು ರಾಜ್ಯ ಸರ್ಕಾರ ರೂಪಿಸಿದೆ.

ಕಳೆದ ವರ್ಷವೂ ಕೋವಿಡ್ ಕಾರಣದಿಂದ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು.

‘ಬಿಜೆಪಿ ಮೇಲ್ಜಾತಿ, ಸಿರಿವಂತರ ಪರವಿದ್ದು, ಬಡವರ ವಿರೋಧಿಯಾಗಿದೆ’ – ಸಿದ್ದರಾಮಯ್ಯ