'ರಾಮ್​ಸೇತು' ಚಿತ್ರತಂಡದ 45 ಜನರಿಗೆ ಕೊರೊನಾ ದೃಢ- ಚಿತ್ರೀಕರಣಕ್ಕೆ ಬ್ರೇಕ್ - BC Suddi
‘ರಾಮ್​ಸೇತು’ ಚಿತ್ರತಂಡದ 45 ಜನರಿಗೆ ಕೊರೊನಾ ದೃಢ- ಚಿತ್ರೀಕರಣಕ್ಕೆ ಬ್ರೇಕ್

‘ರಾಮ್​ಸೇತು’ ಚಿತ್ರತಂಡದ 45 ಜನರಿಗೆ ಕೊರೊನಾ ದೃಢ- ಚಿತ್ರೀಕರಣಕ್ಕೆ ಬ್ರೇಕ್

ಮುಂಬೈ: ‘ರಾಮ್​ಸೇತು’ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಬಾಲಿವುಡ್‌ ನಟ ಅಕ್ಷಯ್ ಕುಮಾರ್​ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಭಾನುವಾರವಷ್ಟೇ ದೃಢಪಟ್ಟಿದೆ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬೆನ್ನಲ್ಲೇ ಚಿತ್ರತಂಡದ 45 ಜನರಿಗೆ ಕೊರೊನಾ ಖಚಿತವಾಗಿರುವುದು ಬಾಲಿವುಡ್‌ಗೆ ಬಿಗ್‌ ಶಾಕ್ ನೀಡಿದೆ.

ಮಧ್ಯ ಐಲ್ಯಾಂಡ್​ನಲ್ಲಿ ರಾಮ್​ಸೇತು ಚಿತ್ರದ ಇನ್ನೊಂದು ಹಂತದ ಶೂಟಿಂಗ್ ಸೋಮವಾರ ಶುರುವಾಗಬೇಕಿತ್ತು. 100 ಜನರ ತಂಡ ಈ ಚಿತ್ರೀಕರಣದಲ್ಲಿ ಭಾಗವಹಿಸಬೇಕಿತ್ತು. ಚಿತ್ರೀಕರಣಕ್ಕೂ ಮುನ್ನ ಎಲ್ಲರೂ ಒಮ್ಮೆ ಚೆಕ್ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ತೀರ್ವನವಾಗಿತ್ತು. ಈ ಹಿನ್ನೆಲೆ ಪರೀಕ್ಷೆಗೆ ಒಳಗಾದ ಅಕ್ಷಯ್ ಕುಮಾರ್‌ ಅವರಿಗೆ ಮೊದಲು ಕೊರೊನಾ ಪಾಸಿಟಿವ್ ಇರುವುದು ಗೊತ್ತಾಯಿತು. ಈ ಮಧ್ಯೆ 45 ಕಿರಿಯ ಕಲಾವಿದರಿಗೂ ಕೋವಿಡ್ ವೈರಸ್ ತಗುಲಿರುವ ಹಿನ್ನೆಲೆಯಲ್ಲಿ ಸದ್ಯ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.

error: Content is protected !!