ರಾಜಸ್ಥಾನ: ತಹಶೀಲ್ದಾರ್ ಒಬ್ಬರು ಗ್ಯಾಸ್ ಸ್ಟೊವ್ ಹಚ್ಚಿ ಲಕ್ಷಾಂತರ ರೂಪಾಯಿ ಹಣವನ್ನು ಸುಟ್ಟು ಹಾಕಿದ ವಿಡಿಯೋ ವೈರಲ್ - BC Suddi
ರಾಜಸ್ಥಾನ: ತಹಶೀಲ್ದಾರ್ ಒಬ್ಬರು ಗ್ಯಾಸ್ ಸ್ಟೊವ್ ಹಚ್ಚಿ ಲಕ್ಷಾಂತರ ರೂಪಾಯಿ ಹಣವನ್ನು ಸುಟ್ಟು ಹಾಕಿದ ವಿಡಿಯೋ ವೈರಲ್

ರಾಜಸ್ಥಾನ: ತಹಶೀಲ್ದಾರ್ ಒಬ್ಬರು ಗ್ಯಾಸ್ ಸ್ಟೊವ್ ಹಚ್ಚಿ ಲಕ್ಷಾಂತರ ರೂಪಾಯಿ ಹಣವನ್ನು ಸುಟ್ಟು ಹಾಕಿದ ವಿಡಿಯೋ ವೈರಲ್

ರಾಜಸ್ಥಾನ: ಇಲ್ಲಿನ ಸಿರೋಹಿಯಲ್ಲಿ ತಹಶೀಲ್ದಾರ್ ಒಬ್ಬರು ಗ್ಯಾಸ್ ಸ್ಟೊವ್ ಹಚ್ಚಿದ್ದೇ ಲಕ್ಷಾಂತರ ರೂಪಾಯಿ ನೋಟುಗಳನ್ನ ಸುಟ್ಟು ಹಾಕಿದ ವಿಡಿಯೋವೊಂದು ಬೆಳಕಿಗೆ ಬಂದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಅದ್ರಂತೆ, ಎಸಿಬಿ ತಂಡ ಸಿರೋಹಿ ಜಿಲ್ಲೆಗೆ ಆಗಮಿಸಿದಾಗ ಅಚ್ಚರಿಯ ಘಟನೆಯೊಂದು ನಡೆದಿದೆ.

ಪಿಂಡೋ ಬಾರಾವತ್ ಠಾಣಾ ವ್ಯಾಪ್ತಿಯ ಅಧಿಕಾರಿಗಳು ಮನೆ ಹೊರಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳನ್ನ ನೋಡಿದ್ದೇ ತಡ ಬಾಗಿಲು ಮುಚ್ಚಿದ್ದಾರೆ. ನಂತರ ಎಸಿಬಿ ತಂಡ ಬಾಗಿಲು ತೆರೆಯಬೇಕೆಂದು ಪಟ್ಟು ಹಿಡಿದ್ರು ಅವ್ರು ಅದನ್ನ ಕೇಳಲಿಲ್ಲ. ಆದ್ರೆ, ಈ ಮಧ್ಯೆ ಯಾರೋ ಒಬ್ಬರು ಕಿಟಕಿಯಿಂದ ಮನೆಯೊಳಗೆ ನೋಡಿದ್ದೇ ಆಶ್ಚರ್ಯಚಕಿತರಾಗಿದ್ದಾರೆ. ಯಾಕಂದ್ರೆ, ಗ್ಯಾಸ್ ಸ್ಟೊವ್’ನಲ್ಲಿ ನೋಟುಗಳ ರಾಶಿಯನ್ನ ತಹಾಶೀಲ್ದಾರ್ ಅವರು ಸುಟ್ಟು ಹಾಕುತ್ತಿದ್ರು.

ನಂತ್ರ ಹೇಗೋ ಕಲ್ಲೇಶ್ ಜೈನ್’ನನ್ನ ಕರೆದೊಯ್ದು ಅಧಿಕಾರಿಗಳು ಅರ್ಧ ಸುಟ್ಟ ನೋಟುಗಳನ್ನ ವಶ ಪಡಿಸಿಕೊಂಡಿದ್ದಾರೆ. ತಹಶೀಲ್ದಾರ್ ಕಲ್ಲೇಶ್ ಜೈನ್ ಅವರು ಗುತ್ತಿಗೆಗೆ 1 ಲಕ್ಷ ರೂ ಲಂಚ ಕೇಳುತ್ತಿದ್ದಾರೆ ಎಂದು ಎಸಿಬಿಗೆ ಮಾಹಿತಿ ನೀಡಲಾಗಿತ್ತು. ಈ ಯೋಜನೆ ಅನ್ವಯ, ಎಸಿಬಿಯು ಕಂದಾಯ ನಿರೀಕ್ಷಕ ಪರ್ಬತ್ ಸಿಂಗ್’ರಿ0ದ ಒಂದು ಲಕ್ಷ ರೂಪಾಯಿ ಲಂಚದ ಹಣವಾಗಿ ತೆಗೆದುಕೊಂಡಿದ್ದು, ಎಸಿಬಿ ತಂಡ ಕಲ್ಲೇಶ್’ನ ಮನೆಗೆ ತಲುಪಿತು.

ತಂಡ ಅಲ್ಲಿಗೆ ಬರುತ್ತಿದ್ದಂತೆಯೇ ಅವ್ರು ಬಾಗಿಲು ಮುಚ್ಚಿ ನೋಟುಗಳನ್ನು ಬೆಂಕಿಯಲ್ಲಿ ಹಾಕಿ ಸುಟ್ಟಿದ್ದಾರೆ. ತಕ್ಷಣ ಎಸಿಬಿ ಬಾಗಿಲು ಮುರಿದು ಒಳ ನುಗ್ಗಿ 20 ಲಕ್ಷಕ್ಕೂ ಹೆಚ್ಚು ಹಣ ಸುಟ್ಟಿರುವ ಹಣ ಮತ್ತು 1.5 ಲಕ್ಷ ರೂ.ಗಿಂತ ಹೆಚ್ಚು ನಗದು ಮೊತ್ತ ವಶಪಡಿಸಿಕೊಂಡಿದ್ದಾರೆ. ಸದ್ಯ ಎಸಿಬಿಯ ಒಟ್ಟು ಆಸ್ತಿ ಪರಿಶೀಲನೆ ನಡೆಸುತ್ತಿದೆ.

error: Content is protected !!