ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಬಂದ ಉತ್ತರ ಕರ್ನಾಟಕದ ಆರಾಧ್ಯ ದೈವ ಸದ್ಗುರು ಶ್ರೀ ಸಿದ್ಧಾರೂಢರು...! - BC Suddi
ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಬಂದ ಉತ್ತರ ಕರ್ನಾಟಕದ ಆರಾಧ್ಯ ದೈವ ಸದ್ಗುರು ಶ್ರೀ ಸಿದ್ಧಾರೂಢರು…!

ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಬಂದ ಉತ್ತರ ಕರ್ನಾಟಕದ ಆರಾಧ್ಯ ದೈವ ಸದ್ಗುರು ಶ್ರೀ ಸಿದ್ಧಾರೂಢರು…!

ಹುಬ್ಬಳ್ಳಿ: ಅದು ವಾಣಿಜ್ಯನಗರಿ ಜನರ ಬಹುದಿನಗಳ ಕನಸು.ಆ ಕನಸು ನೆರವೇರಿದ ಬೆನ್ನಲ್ಲೇ ಮತ್ತೊಂದು ನಿರೀಕ್ಷೆ ಕೂಡ ಫಲ ಕಂಡಿದೆ.ಬಹುದಿನಗಳ ಬೇಡಿಕೆ ಈಡೇರಿದ್ದು,ಈಗ ಜನರ ಮುಖದಲ್ಲಿ ನಗೆ ಮೊಳಗಿದೆ.ಅಷ್ಟಕ್ಕೂ ಯಾವುದು ಆ ನಿರೀಕ್ಷೆ…? ಸಿಕ್ಕಿರುವ ಫಲವಾದರೂ ಏನು ಅಂತೀರಾ..

ನೈಋತ್ಯ ರೈಲ್ವೆಯ ವಿಭಾಗದ ವಾಣಿಜ್ಯನಗರಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಶ್ರೀಸಿದ್ಧಾರೂಡರ ನಾಮಕರಣ ಮಾಡಿದ ಬೆನ್ನಲ್ಲೇ ಈಗ ಸಿದ್ಧಾರೂಡರು ಕೂಡ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಹೌದು.ಇಂದು ರೈಲ್ವೆ ನಿಲ್ದಾಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹರ ಗುರು ಚರಮೂರ್ತಿ ಸಮ್ಮುಖದಲ್ಲಿ ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಯಿತು. ಅಲ್ಲದೇ ಇಂದು ಕೂಡ ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಸದ್ಗುರು ಸಿದ್ಧಾರೂಡರ ಮೂರ್ತಿಯನ್ನು ಕೂಡ ತೆಗೆದುಕೊಂಡು ಬರಲಾಗಿದ್ದು, ಕ್ರೇನ್ ಮೂಲಕ ಸೂಚಿಸಿದ ಸ್ಥಳದಲ್ಲಿ ಶ್ರೀಸಿದ್ಧಾರೂಢರ ಮೂರ್ತಿಯನ್ನು ಇಡಲಾಗಿದೆ.

ಇನ್ನೂ ಅಮೃತಶಿಲೆಯಲ್ಲಿ ಜೈಪುರದಿಂದ ತಯಾರಿಸಿದ ಶ್ರೀಸಿದ್ಧಾರೂಢರ ಮೂರ್ತಿಯನ್ನು ತೆಗೆದುಕೊಂಡ ಬರಲಾಗಿದ್ದು,ವ್ಯವಸ್ಥಾಪಕ ನಿರ್ದೇಶಕರಾದ ಅಜಯಕುಮಾರ್ ಸಿಂಗ್ ಅವರ ನಿರ್ದೇಶನದಲ್ಲಿಯೇ ರೈಲ್ವೆ ಆವರಣದಲ್ಲಿ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗಿದೆ.ಅಲ್ಲದೇ ಶೀಘ್ರವಾಗಿ ಸಂಪ್ರದಾಯದ ಮೂಲಕ ಲೋಕಾರ್ಪಣೆಗೊಳ್ಳಲಿದೆ.

ಒಟ್ಟಿನಲ್ಲಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಸದ್ಗುರು ಸಿದ್ಧಾರೂಡರು ಆಗಮಿಸಿದ್ದು,ಎಲ್ಲರಿಗೂ ಸಂತೋಷದ ಸಂಗತಿಯಾಗಿದ್ದು,ಓಂಕಾರ ನಾದದ ಮೂಲಕ ಸಿದ್ಧಾರೂಢರ ಮೂರ್ತಿಯನ್ನು ಶುದ್ಧಗೊಳಿಸಿದ ಸಿದ್ಧಾರೂಢರ ಭಕ್ತರು ಆರಾಧ್ಯ ದೈವ ಶ್ರೀಸಿದ್ಧಾರೂಢರ ಭಕ್ತಿಗೆ ಪಾತ್ರರಾದರು.

error: Content is protected !!