ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೊಟ್ಟ ರೈಲ್ವೆ ಇಲಾಖೆ - BC Suddi
ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೊಟ್ಟ ರೈಲ್ವೆ ಇಲಾಖೆ

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೊಟ್ಟ ರೈಲ್ವೆ ಇಲಾಖೆ

ನವದೆಹಲಿ: ರೈಲ್ವೆ ಇಲಾಖೆಯು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಉತ್ತರ ಮಧ್ಯ ರೈಲ್ವೆ (ಎನ್ ಸಿಆರ್) ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಏಪ್ರಿಲ್ 16ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ:
ಫಿಟ್ಟರ್- 286
ವೆಲ್ಡರ್- 11
ಮೆಕ್ಯಾನಿಕ್- 84
ಬಡಗಿ- 11
ಎಲೆಕ್ಟ್ರಿಷಿಯನ್- 88

ಶೈಕ್ಷಣಿಕ ಅರ್ಹತೆ: ಆಸಕ್ತ ಅಭ್ಯರ್ಥಿಯು 10ನೇ ತರಗತಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅಭ್ಯರ್ಥಿಯು ಎನ್‌ಸಿವಿಟಿಗೆ ಅಂಗೀಕೃತವಾದ ಮಾನ್ಯತೆ ಪಡೆದ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಸಂಬಂಧಿತ ಟ್ರೇಡ್‌ನಲ್ಲಿ ಒಂದು ಐಟಿಐ ಪ್ರಮಾಣಪತ್ರವನ್ನು ಸಹ ಹೊಂದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?: ಮೊದಲು mponline.gov.in ಅಧಿಕೃತ ವೆಬ್ ಸೈಟ್‌ಗೆ ಭೇಟಿ ನೀಡಬೇಕು. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಫಾರ್ಮ್ ಅನ್ನು ಹೋಗಿ ಮತ್ತು ಅಗತ್ಯವಿದ್ದಲ್ಲಿ ಎಡಿಟ್ ಮಾಡಿ. ಬಳಿಕ ಸಬ್ ಮಿಟ್ ಮಾಡಿ. ಅಭ್ಯರ್ಥಿಗಳಿಗೆ ನೋಂದಣಿ ಸಂಖ್ಯೆ ನೀಡಲಾಗುವುದು. ಅಭ್ಯರ್ಥಿಗಳು ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು.

ಅರ್ಜಿ ಶುಲ್ಕ 100 ರೂ. ಮತ್ತು 70 ರೂ. ಪೋರ್ಟಲ್ ಶುಲ್ಕವನ್ನು ನೋಂದಣಿ ಸಮಯದಲ್ಲಿ ಅಭ್ಯರ್ಥಿಯೇ ಪಾವತಿಸಬೇಕು.

ಮೆರಿಟ್ ಪಟ್ಟಿ: ಆಯ್ಕೆಯಾದ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಉತ್ತರ ಕೇಂದ್ರ ರೈಲ್ವೆಯ (ಎನ್‌ಸಿಆರ್) ವೆಬ್ ಸೈಟ್‌ನಲ್ಲಿ ncr.indianrailway.gov.in ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಅರ್ಹ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಅಭ್ಯರ್ಥಿಗಳಿಗೆ ಅಂಚೆ ಮೂಲಕ ಮಾಹಿತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ, ಆಸಕ್ತ ಅರ್ಹ ಅಭ್ಯರ್ಥಿಗಳು mponline.gov.in ಮತ್ತು ncr.indianrailway.gov.in. ವೆಬ್‌ಸೈಟ್‌ಗಳನ್ನು ಪರಿಶೀಲಿಸಬಹುದು.

ಆರೋಪಿಯನ್ನ ಬಿಟ್ಟು ಸಂತ್ರಸ್ತೆ ಪೋಷಕರ ವಿಚಾರಣೆ ಯಾವ ನ್ಯಾಯ?- ಎಸ್‌ಐಟಿ ವಿರುದ್ಧ ಯುವತಿ ಪರ ವಕೀಲ ಕಿಡಿ

error: Content is protected !!