ಸರ್ವಾಧಿಕಾರಿ ಸದ್ದಾಂ, ಗಡಾಫಿ ಕೂಡ ಚುನಾವಣೆ ಗೆಲ್ಲುತ್ತಿದ್ದರು: ರಾಹುಲ್ ಗಾಂಧಿ - BC Suddi
ಸರ್ವಾಧಿಕಾರಿ ಸದ್ದಾಂ, ಗಡಾಫಿ ಕೂಡ ಚುನಾವಣೆ ಗೆಲ್ಲುತ್ತಿದ್ದರು: ರಾಹುಲ್ ಗಾಂಧಿ

ಸರ್ವಾಧಿಕಾರಿ ಸದ್ದಾಂ, ಗಡಾಫಿ ಕೂಡ ಚುನಾವಣೆ ಗೆಲ್ಲುತ್ತಿದ್ದರು: ರಾಹುಲ್ ಗಾಂಧಿ

ನವದೆಹಲಿ: ಇರಾಕ್‌ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಹಾಗೂ ಲಿಬಿಯಾದ ಮುಅಮ್ಮರ್ ಗಡಾಫಿ ಅವರು ಸಹ ಚುನಾವಣೆ ಗೆಲ್ಲುತ್ತಿದ್ದರು ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಆನ್‌ಲೈನ್ ಸಂವಾದದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಪ್ರಜಾಪ್ರಭುತ್ವದ ಅವನತಿಯಾಗುತ್ತಿದೆ. ಇತ್ತ ಸದ್ದಾಂ ಹುಸೇನ್ ಮತ್ತು ಗಡಾಫಿ ಸಹ ಚುನಾವಣೆ ನಡೆಸುತ್ತಿದ್ದರು ಮತ್ತು ಗೆಲುವು ಸಾಧಿಸುತ್ತಿದ್ದರು. ಅಲ್ಲಿ ಮತದಾನ ನಡೆಯುತ್ತಿಲ್ಲ ಎಂಬುದಲ್ಲ. ಆದರೆ ಆ ಮತವನ್ನು ರಕ್ಷಿಸಲು ಯಾವುದೇ ಸಾಂವಿಧಾನಿಕ ಚೌಕಟ್ಟು ಇರಲಿಲ್ಲ ಎಂದರು.

ಚುನಾವಣೆ ಎಂದರೆ ಸುಮ್ಮನೆ ಹೋಗಿ ವೋಟಿಂಗ್ ಮಷಿನ್​ ಬಟನ್ ಒತ್ತಿ ಬರುವುದಲ್ಲ. ಚುನಾವಣೆ ಒಂದು ವ್ಯಾಖ್ಯಾನ. ಚುನಾವಣೆಗಳು ದೇಶದ ಸ್ಥಿತಿಗತಿ ಸರಿಯಾಗಿದೆಯಾ? ಅದರ ನಿರ್ವಹಣೆ ಸರಿಯಾಗಿ ನಡೆಯುತ್ತಿದೆಯಾ? ಎಂದು ನಿರ್ಧರಿಸುವ ಕಾರ್ಯ. ನ್ಯಾಯಾಂಗ ಮತ್ತು ಪಾರ್ಲಿಮೆಂಟ್​ನಲ್ಲಿ ವಾದಗಳು ನಡೆಯುತ್ತಿವೆ ಎಂದು ನಿರ್ಧರಿಸುವ ವ್ಯವಸ್ಥೆ. ಹೀಗಾಗಿ ಮತ ಚಲಾಯಿಸುವಾಗ ಇವೆಲ್ಲವೂ ಲೆಕ್ಕಕ್ಕೆ ಬರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

error: Content is protected !!