ಕೋವಿಡ್ ಲಸಿಕೆ ಬದಲು ರೇಬೀಸ್ ಲಸಿಕೆಯನ್ನು ನೀಡಿದ್ದ ಸರ್ಕಾರಿ ಆರೋಗ್ಯ ಕೇಂದ್ರದ ನರ್ಸ್ - BC Suddi
ಕೋವಿಡ್ ಲಸಿಕೆ ಬದಲು ರೇಬೀಸ್ ಲಸಿಕೆಯನ್ನು ನೀಡಿದ್ದ ಸರ್ಕಾರಿ ಆರೋಗ್ಯ ಕೇಂದ್ರದ ನರ್ಸ್

ಕೋವಿಡ್ ಲಸಿಕೆ ಬದಲು ರೇಬೀಸ್ ಲಸಿಕೆಯನ್ನು ನೀಡಿದ್ದ ಸರ್ಕಾರಿ ಆರೋಗ್ಯ ಕೇಂದ್ರದ ನರ್ಸ್

 ಉತ್ತರ ಪ್ರದೇಶದ ಶಾಮ್ಲಿ ಜಿಲ್ಲಾಯ ಮೂವರು ಮಹಿಳೆಯರಿಗೆ ಕೋವಿಡ್ ಲಸಿಕೆ ಬದಲು ರೇಬೀಸ್ ಲಸಿಕೆಯನ್ನು ನೀಡಿದ್ದ ಸರ್ಕಾರಿ ಆರೋಗ್ಯ ಕೇಂದ್ರವೊಂದರ ನರ್ಸ್ ಅನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಜಸ್ಜಿತ್ ಕೌರ್ ಅವರು ನೀಡಿದ ಆದೇಶದಂತೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ರಂಬೀರ್‍ಸಿಂಗ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಗಾಯಿಸಲಾಗಿದೆ.

ಕಳೆದ ವಾರ ಸರೋಜ್ (70), ಅನಾರ್ಕಲಿ (72) ಮತ್ತು ಸತ್ಯವತಿ (60) ಮೂವರು ಮಹಿಳೆಯರು ಕಬ್ಲಾದ ಆರೋಗ್ಯ ಕೇಂದ್ರಕ್ಕೆ ಕೊರೊನಾ ಲಸಿಕೆ ಸ್ವೀಕರಿಸಲು ಹೋಗಿದ್ದರು, ಆದರೆ ಲಸಿಕೆಗಳನ್ನೂ ನೀಡಿದ ನಂತರ ಅವರಿಗೆ ರೇಬೀಸ್ ವಿರೋಧಿ ಲಸಿಕೆ ಸ್ಲಿಪ್‍ಗಳನ್ನು ನೀಡಿ ತಪ್ಪೆಸೆಗಿದ ವೈದ್ಯಕೀಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಆದೇಶಿಸಲಾಯಿತು.

ಕುಂಭ ಮೇಳದಲ್ಲಿ ಪಾಲ್ಗೊಂಡ ರಾಜ್ಯದ ಯಾತ್ರಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ