ರಾಣಿ ಎರಡನೇ ಎಲಿಜಬೆತ್ ಪತಿ ಪ್ರಿನ್ಸ್‌ ಫಿಲಿಪ್‌ ನಿಧನ - BC Suddi
ರಾಣಿ ಎರಡನೇ ಎಲಿಜಬೆತ್ ಪತಿ ಪ್ರಿನ್ಸ್‌ ಫಿಲಿಪ್‌ ನಿಧನ

ರಾಣಿ ಎರಡನೇ ಎಲಿಜಬೆತ್ ಪತಿ ಪ್ರಿನ್ಸ್‌ ಫಿಲಿಪ್‌ ನಿಧನ

ಲಂಡನ್: ರಾಣಿ 2ನೇ ಎಲಿಜಬೆತ್ ಅವರ ಪತಿ ಪ್ರಿನ್ಸ್‌ ಫಿಲಿಪ್‌(99) ಅವರು ಶುಕ್ರವಾರ ನಿಧನರಾಗಿದ್ದಾರೆ ಎಂದು ಬಕಿಂಗ್ ಹ್ಯಾಮ್ ಅರಮನೆ ಪ್ರಕಟಿಸಿದೆ. ಪ್ರಿನ್ಸ್‌ ಫಿಲಿಪ್‌ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದು ಹಾಗೂ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಎಂದು ತಿಳಿಸಿದೆ.

ತನ್ನ ಪ್ರೀತಿಯ ಪತಿ, ಡ್ಯೂಕ್‌ ಆಫ್‌‌ ಎಡಿನ್‌ ಬರ್ಗ್‌-ಪ್ರಿನ್ಸ್‌ ಫಿಲಿಪ್‌ ಅವರು ಮೃತಪಟ್ಟಿರುವುದಾಗಿ ರಾಣಿ ಎಲಿಜಬೆತ್‌ ಅವರು ಘೋಷಿಸಿದ್ದು, ಅವರ ಸಾವಿನಿಂದ ತೀವ್ರ ದುಃಖವಾಗಿದೆ ಎಂದು ತಮ್ ಹೇಳಿಕೆ ತಿಳಿಸಿದೆ.

ಬ್ರಿಟನ್‌‌ ರಾಣಿ ಎರಡನೇ ಎಲಿಜಬೆತ್‌‌ ಅವರನ್ನು ಫಿಲಿಪ್‌ ಅವರು 1947ರಲ್ಲಿ ವಿವಾಹವಾಗಿದ್ದರು. ಅವರು 4 ಮಕ್ಕಳನ್ನು, 8 ಮೊಮ್ಮಕ್ಕಳನ್ನು ಹಾಗೂ 9 ಮಂದಿ ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸರ್ಕಾರದ ಕಪಿಮುಷ್ಠಿಯಲ್ಲಿದ್ದ 51 ದೇವಸ್ಥಾನಗಳಿಗೆ ಮುಕ್ತಿ