ಪತ್ನಿಗೆ ಕೊರೊನಾ ಸೋಂಕು - ಕ್ವಾರಂಟೈನ್‌ ಆದ ದೆಹಲಿ ಸಿಎಂ ಅರವಿಂದ್‌ ಕೇಜ್ರೀವಾಲ್‌ - BC Suddi
ಪತ್ನಿಗೆ ಕೊರೊನಾ ಸೋಂಕು – ಕ್ವಾರಂಟೈನ್‌ ಆದ ದೆಹಲಿ ಸಿಎಂ ಅರವಿಂದ್‌ ಕೇಜ್ರೀವಾಲ್‌

ಪತ್ನಿಗೆ ಕೊರೊನಾ ಸೋಂಕು – ಕ್ವಾರಂಟೈನ್‌ ಆದ ದೆಹಲಿ ಸಿಎಂ ಅರವಿಂದ್‌ ಕೇಜ್ರೀವಾಲ್‌

ದೆಹಲಿ ಸಿಎಂ ಅರವಿಂದ್‌ ಕೇಜ್ರೀವಾಲ್‌‌ ಅವರ ಪತ್ನಿ ಸುನಿತಾ ಕೇಜ್ರೀವಾಲ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆ ಅರವಿಂದ್‌ ಕೇಜ್ರೀವಾಲ್‌ ಅವರು ಹೋಂ ಕ್ವಾರಂಟೈನ್ ಆಗಿದ್ದಾರೆ.

ವಯಸ್ಸಾದ ತಂದೆ-ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕೇಜ್ರೀವಾಲ್‌ ವಾಸಿಸುತ್ತಿದ್ದಾರೆ. ಅಲ್ಲದೇ ಇದೀಗ ಪತ್ನಿಗೂ ಕೂಡಾ ಕೊರೊನಾ ದೃಢಪಟ್ಟಿದೆ. ಇನ್ನು ಎಎಪಿಯ ಕೆಲವು ಶಾಸಕರಿಗೂ ಕೊರೊನಾ ಸೋಂಕು ತಗುಲಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಅರವಿಂದ್‌ ಕೇಜ್ರೀವಾಲ್‌ ಅವರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಜ್ರೀವಾಲ್‌ ಕೇಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನಸ್‌‌ ಮೂಲಕ ಸಭೆ ನಡೆಸುತ್ತಿದ್ದಾರೆ.

ದೆಹಲಿಯಲ್ಲಿ ಒಂದೇ ದಿನದಲ್ಲಿ ಸುಮಾರು 28,395 ಕೊರೊನಾ ಪ್ರಕರಣಗಳು ವರದಿಯಾಗಿದೆ.

ಮಧ್ಯಪ್ರದೇಶ: ಆಸ್ಪತ್ರೆಗೆ ಅಮ್ಲಜನಕ ಹೊತ್ತ ಟ್ರಕ್ ಬರುತ್ತಿದ್ದಂತೆ ಸಿಲಿಂಡರ್’ಗಳ ದರೋಡೆ