ಹಾಲು ಮಾರಾಟಕ್ಕೆ ಅವಕಾಶ, ಕಟ್ಟಡ ಕಾಮಗಾರಿಗೆ ಕಡಿವಾಣ: ಹೊಸ ಮಾರ್ಗಸೂಚಿ ಪ್ರಕಟ - BC Suddi
ಹಾಲು ಮಾರಾಟಕ್ಕೆ ಅವಕಾಶ, ಕಟ್ಟಡ ಕಾಮಗಾರಿಗೆ ಕಡಿವಾಣ: ಹೊಸ ಮಾರ್ಗಸೂಚಿ ಪ್ರಕಟ

ಹಾಲು ಮಾರಾಟಕ್ಕೆ ಅವಕಾಶ, ಕಟ್ಟಡ ಕಾಮಗಾರಿಗೆ ಕಡಿವಾಣ: ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರವು ಹೊರಡಿಸಿರುವ ಕರ್ಫ್ಯೂ ಮಾರ್ಗಸೂಚಿಯಲ್ಲಿ ಮತ್ತೆ ಪರಿಷ್ಕಾರ ತರಲಾಗಿದೆ.

ಹೊಸ ಮಾರ್ಗಸೂಚಿ ಪ್ರಕಾರ, ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತ್ತೊಂದೆಡೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಳಸುವ ಸರಕುಗಳ ಸಾಗಣೆಗೆ ಪೊಲೀಸರು ನಿರ್ಬಂಧ ಹೇರಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಕಮಲ್​ ಪಂತ್, “ಸಂಜೆ ಬಳಿಕ ಕಟ್ಟಡ ನಿರ್ಮಾಣ ಕಾಮಗಾರಿಗೆ ಸರಕು ಸಾಗಣೆಗೆ ಅವಕಾಶ ನೀಡಲಾಗುವುದು. ಸರಕು ಸಾಗಿಸುವ ಲಾರಿ, ಟೆಂಪೊ, ಆಟೋಗಳಿಗೂ ನಗರದಲ್ಲಿ ನಿರ್ಬಂಧ ಹೇರಬೇಕು” ಎಂದು ಸೂಚಿಸಿದ್ದಾರೆ.

ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದಿದ್ದ 1,707 ವಾಹನಗಳನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಪೈಕಿ 1530 ಬೈಕ್, 80 ಆಟೊಗಳು, 97 ಕಾರುಗಳು ಸೇರಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ 6 ಪ್ರಕರಣಗಳನ್ನು ದಾಖಲಿಸಲಾಗಿದೆ.