''ಸಚಿವರೊಬ್ಬರು ತಮಗೆ ಪ್ರಮಾಣ ವಚನ ಭೋದಿಸಿದ ರಾಜ್ಯಪಾಲರ ಬಳಿಯೇ ಸಿಎಂ ವಿರುದ್ದ ದೂರು ನೀಡಿರುವಾಗ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ : ಡಿಕೆಶಿ - BC Suddi
”ಸಚಿವರೊಬ್ಬರು ತಮಗೆ ಪ್ರಮಾಣ ವಚನ ಭೋದಿಸಿದ ರಾಜ್ಯಪಾಲರ ಬಳಿಯೇ ಸಿಎಂ ವಿರುದ್ದ ದೂರು ನೀಡಿರುವಾಗ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ : ಡಿಕೆಶಿ

”ಸಚಿವರೊಬ್ಬರು ತಮಗೆ ಪ್ರಮಾಣ ವಚನ ಭೋದಿಸಿದ ರಾಜ್ಯಪಾಲರ ಬಳಿಯೇ ಸಿಎಂ ವಿರುದ್ದ ದೂರು ನೀಡಿರುವಾಗ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ : ಡಿಕೆಶಿ

ಬೆಂಗಳೂರು: ಸಿಡಿ ಪ್ರಕರಣದ ನಡುವೆ ರಾಜ್ಯ ರಾಜಕಾರಣದಲ್ಲಿ ಈಶ್ವರಪ್ಪನವರು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ದ ರಾಜ್ಯಪಾಲರಿಗೆ ದೂರು ನೀಡಿರುವುದು ಸಂಚಲನ ಮೂಡಿಸಿದೆ. ”ಸಚಿವರೊಬ್ಬರು ತಮಗೆ ಪ್ರಮಾಣ ವಚನ ಭೋದಿಸಿದ ರಾಜ್ಯಪಾಲರ ಬಳಿಯೇ ಸಿಎಂ ವಿರುದ್ದ ದೂರು ನೀಡಿರುವಾಗ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಅಥವಾ ಈಶ್ವರಪ್ಪನವರನ್ನು ತೆಗೆದು ಹಾಕಲಿ” ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ ಅವರು, ”ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪನವರು ನೈತಿಕ ಹೊಣೆ ಹೊತ್ತು, ನನ್ನ ಮೇಲೆ ಮಂತ್ರಿ ಮಂಡಲದಲ್ಲಿ ಸಚಿವರು ಆರೋಪ ಮಾಡಿದ್ದಾರೆ ಎಂಬ ಕಾರಣ ಕೊಟ್ಟು, ತಾನೇ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುವುದು ಬಹಳ ಸೂಕ್ತ” ಎಂದು ಹೇಳಿದ್ದಾರೆ.

”ನಾವು ಮಾಡಿದ್ದ ಯೋಜನೆಗಳನ್ನು ವಾಪಾಸ್‌ ಪಡೆದರು. ನಮ್ಮ ಶಾಸಕರು ಕಂಗಲಾಗುವಂತೆ ಮಾಡಿದ್ದಾರೆ. ಹಲವು ಕಡೆಗಳಲ್ಲಿ ಶಾಸಕರು ತಮ್ಮ ಕಾರ್ಯವ್ಯಾಪ್ತಿಯಲ್ಲಿನ ಕೆಲಸ, ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸುವಂತಾಗಿದೆ. ಇದು ಬಿಜೆಪಿ ಶಾಸಕರಿಗೂ ಅನುಭವಕ್ಕೆ ಬಂದಿದೆ. ಅದನ್ನು ಯತ್ನಾಳ್‌ ಹಾಗೂ ಬೇರೆಯವರೂ ಹೇಳಿದ್ದಾರೆ. ಬೇರೆ ಶಾಸಕರು ಈ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆ” ಎಂದಿದ್ದಾರೆ.

”ಎರಡು ಮೂರು ಜನ ಮಂತ್ರಿಗಳು ಕುಮಾರಸ್ವಾಮಿ ನೇತೃತ್ವದ ಸರ್ಕಾರವಿದ್ದಾಗ ನಮಗೆ ಇವರ ಮೇಲೆ ವಿಶ್ವಾಸವಿಲ್ಲವೆಂದು ರಾಜೀನಾಮೆ ನೀಡಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಅಂದು ನಡೆದದ್ದು ರಾಜಕಾರಣ. ಆದರೆ ಇಂದು ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ದ ರಾಜ್ಯಪಾಲರಿಗೆ ದೂರು ನೀಡಿರುವುದು ದೊಡ್ಡ ಆಡಳಿತಾತ್ಮಕ ವಿಚಾರ. ಪ್ರತಿಜ್ಞಾ ವಿಧಿ ಭೋದಿಸಿದ ರಾಜ್ಯಪಾಲರ ಮೊರೆ ಹೋದ ಬಳಿಕ ಬೇರೆ ಯಾವುದೇ ಮಾರ್ಗವಿಲ್ಲ. ಸಿಎಂ ನೈತಿಕ ಹೊಣೆ ಹೊತ್ತು, ರಾಜೀನಾಮೆ ನೀಡುವುದು ಸೂಕ್ತ” ಎಂದು ಹೇಳಿದ್ದಾರೆ.

ಸಿದ್ದಗಂಗಾ ಶ್ರೀಗಳಿಗೆ ಗೌರವ ಸಲ್ಲಿಸಿ, 114ನೇ ಹುಟ್ಟುಹಬ್ಬ ಶುಭ ಕೋರಿದ ಮೋದಿ

error: Content is protected !!