ಬೆಲೆ ಏರಿಕೆಯ ನಡುವೆ ಮತ್ತೊಂದು ಬಿಗ್‌ ಶಾಕ್‌: ಏ.1 ರಿಂದ ವಿಮಾನಯಾನದ ಟಿಕೆಟ್‌ಗಳು ದುಬಾರಿ - BC Suddi
ಬೆಲೆ ಏರಿಕೆಯ ನಡುವೆ ಮತ್ತೊಂದು ಬಿಗ್‌ ಶಾಕ್‌: ಏ.1 ರಿಂದ ವಿಮಾನಯಾನದ ಟಿಕೆಟ್‌ಗಳು ದುಬಾರಿ

ಬೆಲೆ ಏರಿಕೆಯ ನಡುವೆ ಮತ್ತೊಂದು ಬಿಗ್‌ ಶಾಕ್‌: ಏ.1 ರಿಂದ ವಿಮಾನಯಾನದ ಟಿಕೆಟ್‌ಗಳು ದುಬಾರಿ

ನವದೆಹಲಿ: ನಾಗರಿಕ ವಿಮಾನಯಾನ ನಿಯಂತ್ರಕರು ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಳ, ಪ್ರಯಾಣಿಕರು ಮತ್ತವ್ರ ಲಗೇಜ್‌ʼಗಳ ತಪಾಸಣೆ ಸೇರಿದಂತೆ ವಿವಿಧ ಭದ್ರತಾ ಸೇವೆಗಳಿಗೆ ನೀಡುವ ವಿಮಾನಯಾನ ಭದ್ರತಾ ಶುಲ್ಕ(ಎಎಸ್‌ಎಫ್‌)ವನ್ನ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಟಿಕೆಟ್‌ ದರ ಹೆಚ್ಚಾಗಲಿದೆ ಎನ್ನಲಾಗ್ತಿದೆ. ಬೆಲೆ ಏರಿಕೆಯ ನಡುವೆ ಮತ್ತೊಂದು ಬಿಗ್‌ ಶಾಕ್‌ ಎದುರಾಗಿದ್ದು, ಏ. 1 ರಿಂದ  ವಿಮಾನಯಾನದ ಟಿಕೆಟ್‌ಗಳು ದುಬಾರಿಯಾಗಲಿವೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ, ‘ದೇಶದೊಳಗೆ ಸಂಚರಿಸುವ ಪ್ರತಿ ಪ್ರಯಾಣಿಕರಿಗೆ ವಿಮಾನಯಾನ ಭದ್ರತಾ ಶುಲ್ಕ ₹200, ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 12 ಅಮೆರಿಕನ್ ಡಾಲರ್ ಅಥ್ವಾ ಅಷ್ಟೆ ಬೆಲೆಯ ಭಾರತೀಯ ರೂಪಾಯಿಯನ್ನ ನಿಗದಿಪಡಿಸಲಾಗಿದೆ.

ಇದುವರೆಗೆ ₹ 160 ಮತ್ತು 5.20 ಡಾಲರ್‌ ಶುಲ್ಕವಿತ್ತು. ಅದ್ರಂತೆ, ಈ ಹೊಸ ವಿಮಾನಯಾನ ಭದ್ರತಾ ಶುಲ್ಕ ಏಪ್ರಿಲ್ 1ರಿಂದ ಖರೀದಿಸುವ ಟಿಕೆಟ್‌ʼಗಳಿಗೆ ಅನ್ವಯವಾಗಲಿದೆ’ ಎಂದು ತಿಳಿಸಿದೆ.

error: Content is protected !!