ಪ್ರಜ್ವಲ್ ರೇವಣ್ಣ ಹಾಗೂ ನಾನು ಬೈಕ್‌ನಲ್ಲಿ ಕೇರಳ ಪ್ರವಾಸ ಮಾಡಿದ್ವಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ - BC Suddi
ಪ್ರಜ್ವಲ್ ರೇವಣ್ಣ ಹಾಗೂ ನಾನು ಬೈಕ್‌ನಲ್ಲಿ ಕೇರಳ ಪ್ರವಾಸ ಮಾಡಿದ್ವಿ: ಚಾಲೆಂಜಿಂಗ್ ಸ್ಟಾರ್ ದರ್ಶನ್

ಪ್ರಜ್ವಲ್ ರೇವಣ್ಣ ಹಾಗೂ ನಾನು ಬೈಕ್‌ನಲ್ಲಿ ಕೇರಳ ಪ್ರವಾಸ ಮಾಡಿದ್ವಿ: ಚಾಲೆಂಜಿಂಗ್ ಸ್ಟಾರ್ ದರ್ಶನ್

ಹಾಸನ: ಹಾಸನದಲ್ಲಿ ಯುವ ಸಂಸದರನ್ನು ಗೆಲ್ಲಿಸಿದ್ದೀರಿ. ನಿಜಕ್ಕೂ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಸುಲಭವಾಗಿ ಜನರ ಕೈಗೆ ಸಿಗುವ ಸಂಸದ ಅಂದ್ರೆ ಅದು ಪ್ರಜ್ವಲ್ ರೇವಣ್ಣ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಗಳಿದ್ದಾರೆ. ಸಂತೆಪೇಟೆ ಮೈದಾನದಲ್ಲಿ ನಡೆದ ವಿಶ್ವಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ನಾನು ೮ ವರ್ಷದಿಂದ ಸ್ನೇಹಿತರು.

ಇಬ್ಬರೂ ಬೈಕ್‌ನಲ್ಲಿ ಕೇರಳ ಪ್ರವಾಸ ಮಾಡಿದ್ವಿ. ಕೇರಳಕ್ಕೆ ಹೋಗಿ ಬರುವವರೆಗೂ ಪ್ರಜ್ವಲ್ ಬೈಕ್ ಓಡಿಸಿದ್ದರು. ಇದು ಅವರ ತಾಯಿಗೂ ಗೊತ್ತಿಲ್ಲ ಎಂದರು. ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ನನ್ನ ಹಾಗೂ ದರ್ಶನ್ ಸರ್ ಸ್ನೇಹಕ್ಕೆ ರಾಜಕೀಯ ಬಣ್ಣ ಬೇಡ. ಕೆಲವರು ರಾಜಕೀಯ ಬಣ್ಣ ಕಟ್ಟುವ ಮಾತನಾಡಿರುವುದು ನಮಗೆ ಗೊತ್ತಾಗಿದೆ.

ಸ್ನೇಹವೇ ಬೇರೆ ರಾಜಕೀಯವೇ ಬೇರೆ. ಅದಕ್ಕೂ ಮೀರಿದ್ದು ನಮ್ಮ ದರ್ಶನ್ ಸ್ನೇಹ. ನಾನು ಯಾವುದೇ ರಾಜಕೀಯ ಲಾಭಕ್ಕೆ ದರ್ಶನ್ ಅವರನ್ನು ಈ ಕಾರ್ಯಕ್ರಮದಲ್ಲಿ ಬಳಸಿಕೊಳ್ಳುವುದಿಲ್ಲ ಎಂದು ಹೇಳಿದರು.

 

error: Content is protected !!