ನವದೆಹಲಿ: ನಿಮ್ಮ ಖಾತೆ ಪೋಸ್ಟ್ ಆಫೀಸ್‌ನಲ್ಲಿಯೂ ಇದೇಯಾ ಹಾಗದರೇ ಇಲ್ಲಿ ಒಮ್ಮೆ ನೋಡಿ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕುಗಳು ಈಗ ಎಇಪಿಎಸ್ (ಆಧಾರ್ ಆಧಾರಿತ ಪಾವತಿ ವ್ಯವಸ್ಥೆ) ವಾಪಸಾತಿ, ಠೇವಣಿ ಮತ್ತು ಶುಲ್ಕ ವಿಧಿಸಲು ನಿರ್ಧರಿಸಿದೆ. ಈ ಹೊಸ ನಿಯಮವನ್ನು 1 ಏಪ್ರಿಲ್ 2021 ರಿಂದ ಜಾರಿಗೆ ತರಲಾಗುವುದು ಎಂದು ಹೇಳಲಾಗುತ್ತಿದೆ. ನೀವು ಮೂಲ ಉಳಿತಾಯ ಖಾತೆಯನ್ನು ಹೊಂದಿದ್ದರೆ ಪ್ರತಿ ತಿಂಗಳು ನಾಲ್ಕು ಬಾರಿ ಹಿಂತೆಗೆದುಕೊಳ್ಳುವುದು ಉಚಿತವಾಗಿ ನೀಡಲಾಗುತ್ತದೆ.

ತದನಂತರ, ಪ್ರತಿ ವಹಿವಾಟಿನ ಮೇಲೆ ಕನಿಷ್ಠ 25 ರೂಪಾಯಿಗಳು ಅಥವಾ ಶೇಕಡಾ 0.50ರಷ್ಟು ಮೌಲ್ಯವನ್ನು ಶುಲ್ಕವಾಗಿ ಪಡೆದುಕೊಳ್ಳಲಾಗುತ್ತದೆಯಂತೆ. ಮೂಲ ಉಳಿತಾಯ ಖಾತೆಗಳಲ್ಲಿ ಠೇವಣಿ ಇರಿಸಲು ಯಾವುದೇ ಶುಲ್ಕವಿರುವುದಿಲ್ಲ. ಆದರೆ ಅಂಚೆ ಕಚೇರಿಯಲ್ಲಿ ಉಳಿತಾಯ (ಮೂಲ ಉಳಿತಾಯ ಖಾತೆ ಹೊರತುಪಡಿಸಿ) ಅಥವಾ ಚಾಲ್ತಿ ಖಾತೆ ಇದ್ದರೆ, ಒಂದು ತಿಂಗಳಲ್ಲಿ 25000 ಸಾವಿರದವರೆಗೆ ಹಿಂಪಡೆಯುವುದು ಉಚಿತವಾಗಿದೆ. 25000ದ ಮಿತಿಯನ್ನು ದಾಟಿದ ನಂತರ, ಪ್ರತಿ ವಹಿವಾಟಿನಲ್ಲೂ ಶೇಕಡಾ 0.50 ರಷ್ಟು ಮೌಲ್ಯ ಅಥವಾ ಕನಿಷ್ಠ 25 ರೂಪಾಯಿಗಳನ್ನು ನೀಡಬೇಕಾಗುತ್ತದೆ.

ಇನ್ನೂ ಖಾತೆಯಲ್ಲಿ ಠೇವಣಿ ಇಡಲು ಹೋದರೆ, ಅದಕ್ಕೂ ಒಂದು ನಿಯಮವಿದೆ. ಅದೇನೆಂದರೆ, ಪ್ರತಿ ತಿಂಗಳು 10 ಸಾವಿರ ರೂಪಾಯಿಗಳವರೆಗೆ ಉಚಿತವಾಗಿ ಠೇವಣಿ ಇಡಬಹುದು. ಅದಕ್ಕಿಂತ ಹೆಚ್ಚಿನದನ್ನು ಠೇವಣಿ ಮಾಡಲು, ಪ್ರತಿ ವಹಿವಾಟಿನಲ್ಲಿ 0.50 ಪ್ರತಿಶತದಷ್ಟು ಮೌಲ್ಯ ಅಥವಾ ಕನಿಷ್ಠ 25 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅನಿಯಮಿತ ವಹಿವಾಟುಗಳು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ನೆಟ್‌ವರ್ಕ್ನಲ್ಲಿ ಸಂಪೂರ್ಣವಾಗಿ ಉಚಿತವಾಗಿದೆ.

ಐಪಿಪಿಬಿ ಅಲ್ಲದ ನೆಟ್‌ವರ್ಕ್ಗಳಲ್ಲಿ ತಿಂಗಳಿಗೆ ಮೂರು ವಹಿವಾಟುಗಳು ಉಚಿತವಾಗಿದ್ದು. ಇದರಲ್ಲಿ ಹಣವನ್ನು ಠೇವಣಿ ಇಡುವುದು, ಹಿಂತೆಗೆದುಕೊಳ್ಳುವುದು ಮತ್ತು ಮಿನಿ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವುದು ಸೇರಿದೆ. ಅದರ ನಂತರ ವಹಿವಾಟಿನ ಮೇಲೆ ಶುಲ್ಕವನ್ನು ನಿಮ್ಮ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಉಚಿತ ಮಿತಿ ಪೂರ್ಣಗೊಂಡ ನಂತರ, ಎಲ್ಲಾ ವಹಿವಾಟುಗಳಿಗೆ ಹಣವನ್ನು ಠೇವಣಿ ಇರಿಸಲು 20 ರೂ. ಹಿಂಪಡೆಯುವಿಕೆಯ ಮೇಲೂ ವಹಿವಾಟು ಶುಲ್ಕ 20 ರೂ ದಂಡ ಸೇವಾ ಶುಲ್ಕವನ್ನು ಕಟ್ಟಬೇಕು. ಈ ಅಧಿಸೂಚನೆಯನ್ನು ಇಂಡಿಯಾ ಪೋಸ್ಟ್ ಮಾರ್ಚ್ 1 ರಂದು ನೀಡಿದೆ. ಈ ಬಗ್ಗೆ ಗ್ರಾಹಕರಿಗೆ ಸಂದೇಶದ ಮೂಲಕ ತಿಳಿಸಲಾಗಿದೆ.