ದೀದಿಗೆ ಮೃತ ದೇಹಗಳ ಮೇಲೆ ರಾಜಕೀಯ ಮಾಡುವ ಉದ್ಧೇಶ ಇದೆ: ಮೋದಿ - BC Suddi
ದೀದಿಗೆ ಮೃತ ದೇಹಗಳ ಮೇಲೆ ರಾಜಕೀಯ ಮಾಡುವ ಉದ್ಧೇಶ ಇದೆ: ಮೋದಿ

ದೀದಿಗೆ ಮೃತ ದೇಹಗಳ ಮೇಲೆ ರಾಜಕೀಯ ಮಾಡುವ ಉದ್ಧೇಶ ಇದೆ: ಮೋದಿ

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಚುನಾವಣೆ ಅಖಾಡದಲ್ಲಿ ಸ್ವತಃ ಇಳಿದಿರುವ ಪ್ರಧಾನಿ ಮೋದಿ ದೀದಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಅಸನ್ಸೋಲ್ ಕೈಗಾರಿಕಾ ಪ್ರದೇಶದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಭಾಷಣ ಮಾಡಿದ ಮೋದಿ, ಈಗಾಗಲೇ 4 ಹಂತದ ಚುನಾವಣೆಯಲ್ಲಿ ಟಿಎಂಸಿ ಒಡೆದು ಪುಡಿಯಾಗಿದೆ ಎಂದಿದ್ದಾರೆ.

ಟಿಎಂಸಿ ಅಧ್ಯಕ್ಷೆಗೆ ಮೃತದೇಹಗಳ ಮೇಲೆ ರಾಜಕೀಯ ಮಾಡುವ ಅಭ್ಯಾಸವಿದೆ. ಸಿಟಲ್​​ಕುಚಿಯಲ್ಲಿ ನಡೆದ ಐವರ ಸಾವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು. ದುರದೃಷ್ಟಕರ ಸಾವನ್ನು ರಾಜಕೀಯ ಮಾಡುವ ಮೂಲಕ ಮಮತಾ ಅವರು ತಮ್ಮ ಅಸೂಕ್ಷ್ಮತೆಯನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸತ್ಯ ಏನೆಂದರೆ, ಐವರ ಸಾವಿನಿಂದ ದೀದಿ ತನ್ನದೇ ರಾಜಕೀಯ ಲಾಭದ ಬಗ್ಗೆ ಯೋಚಿಸಿದ್ದಾರೆ. ಅವರಿಗೆ ಮೃತ ದೇಹಗಳೊಂದಿಗೆ ರಾಜಕೀಯ ಮಾಡುವ ಹಳೆಯ ಅಭ್ಯಾಸವಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರದ ಮಧ್ಯಸ್ಥಿಕೆ: ರೆಮ್‌ಡೆಸಿವಿರ್ ಚುಚ್ಚುಮದ್ದು ಬೆಲೆ ಇಳಿಕೆ