ಮುಂಬೈ: ಕೊರೊನಾಗೆ ಪೊಲೀಸ್‌ ಅಧಿಕಾರಿ ಸಾವು - BC Suddi
ಮುಂಬೈ: ಕೊರೊನಾಗೆ ಪೊಲೀಸ್‌ ಅಧಿಕಾರಿ ಸಾವು

ಮುಂಬೈ: ಕೊರೊನಾಗೆ ಪೊಲೀಸ್‌ ಅಧಿಕಾರಿ ಸಾವು

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಏರಿಕೆಯಾಗುತ್ತಿದ್ದು, ಹೆಮ್ಮಾರಿ ಕೊರೊನಾದಿಂದ ಮುಂಬೈ ಪೊಲೀಸ್‌ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.

ವಕೋಲಾ ಪೊಲೀಸ್‌ ಠಾಣೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್ ಮೋಹನ್‌ ದಾಗ್ಡೆ (54) ಮೃತರು. ಮೋಹನ್‌ ದಾಗ್ಡೆ ಅವರಿಗೆ ಕೊರೊನಾ ದೃಢಪಟ್ಟ ಬಳಿಕ ಅವರನ್ನು ಚಿಕಿತ್ಸೆಗಾಗಿ ಬಿಕೆಸಿಯ ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಯಿತು. ಆರೋಗ್ಯ ಸ್ಥಿತಿಯು ಹದಗೆಟ್ಟಿದ್ದರಿಂದ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ಆದರೆ ಸೋಮವಾರ ಮುಂಜಾನೆ 3.30ಕ್ಕೆ ಅವರು ಕೊನೆಯುಸಿರೆಳೆದರು.

ಸಿಎಂ ಬಿಎಸ್‌ವೈ ಉತ್ತರಾಧಿಕಾರಿ ಯಾರು ಎನ್ನುವುದನ್ನು ಪಕ್ಷದ ವರಿಷ್ಠರೇ ತಿಳಿಸಬೇಕು : ಆರ್‌.ಅಶೋಕ್‌‌