ನವದೆಹಲಿ: ಇಂದು ಬೆಳಗ್ಗೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕರೋನವೈರಸ್ ಲಸಿಕೆ ಡೋಸ್ ನೀಡಲಾಯಿತು. ಪಿಎಂ ನರೇಂದ್ರ ಮೋದಿ ಸೋಮವಾರ ಬೆಳಗ್ಗೆ ಟ್ವೀಟ್ ಮಾಡಿ, ರಾಷ್ಟ್ರ ರಾಜಧಾನಿಯ ಏಮ್ಸ್ ಆಸ್ಪತ್ರೆಯಲ್ಲಿ ತಮ್ಮ ಮೊದಲ ಕೋವಿಡ್-19 ಲಸಿಕೆಯನ್ನು ತೆಗೆದುಕೊಂಡಿರುವೆ ಅಂತ ಹೇಳಿದ್ದಾರೆ.

ಈ ಕುರಿತು ಟ್ವಿಟರ್ ನಲ್ಲಿ ಬರೆದುಕೊಂಡಿರುವ ಪಿಎಂ ನರೇಂದ್ರ ಮೋದಿ, “ಏಮ್ಸ್ ನಲ್ಲಿ ನಾನು ಮೊದಲ ಬಾರಿಗೆ COVID-19 ಲಸಿಕೆಯನ್ನು ತೆಗೆದುಕೊಂಡೆ. COVID-19 ನ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ಕ್ಷಿಪ್ರ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹ. ಲಸಿಕೆ ಯನ್ನು ತೆಗೆದುಕೊಳ್ಳಲು ಅರ್ಹರಾದಎಲ್ಲರಿಗೂ ನಾನು ಮನವಿ ಮಾಡಿ” ಎಂದು ಅವರು ಹೇಳಿದ್ದಾರೆ.

ಕೊರೊನಾವೈರಸ್ ಲಸಿಕೆ ಯನ್ನು ತೆಗೆದುಕೊಂಡ ನಂತರ ಪಿಎಂ ನರೇಂದ್ರ ಮೋದಿ ಅವರು, ಭಾರತವನ್ನು “ಕೋವಿಡ್ ಮುಕ್ತ ದೇಶವನ್ನಾಗಿ ಸಲು ಲಸಿಕೆ ಯನ್ನು ಪಡೆಯಲು ಅರ್ಹರಾದ ಎಲ್ಲರಿಗೂ ಮನವಿ ಮಾಡಿದರು. “ಒಟ್ಟಿಗೆ, ನಾವು ಭಾರತವನ್ನು COVID-19 ಮುಕ್ತವನ್ನಾಗಿ ಮಾಡೋಣ!” ಪಿಎಂ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.