ನವದೆಹಲಿ: ”ಸಾಂಕ್ರಾಮಿಕವಲ್ಲದ ರೋಗಗಳ ನಿರ್ವಹಣೆಯಲ್ಲಿ, ಅದನ್ನು ತಡೆಗಟ್ಟುವ ಪ್ರಯತ್ನದಲ್ಲಿ ಭಾರತವು ಮುಂಚೂಣಿಯಲ್ಲಿದೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಂಕ್ರಾಮಿಕವಲ್ಲದ ರೋಗಗಳಿಂದ (ಎನ್ಸಿಡಿ) ಸಂಭವಿಸುವ ಅಕಾಲಿಕ ಮರಣ ಪ್ರಮಾಣ ಕಡಿಮೆಗೊಳಿಸುವ ವಿಷಯದಲ್ಲಿ ವಿಶ್ವಸಂಸ್ಥೆಯ ತರಬೇತಿ ಮತ್ತು ಸಂಶೋಧನೆ (ಯುಎನ್ಐಟಿಎಆರ್) ಭಾರತದ ಪ್ರಯತ್ನವನ್ನು ಹೊಗಳಿದ್ದು ಎನ್ಸಿಡಿಗಳಿಂದ ಉಂಟಾಗುವ ಅಕಾಲಿಕ ಮರಣ ಪ್ರಮಾಣ ತಗ್ಗಿಸಲು ಕೈಗೊಂಡ ಕ್ರಮಗಳು ಹಾಗೂ ರಾಷ್ಟ್ರೀಯ ಬಹುಕ್ಷೇತ್ರೀಯ ಕ್ರಿಯಾ ಯೋಜನೆ ಕುರಿತು ಮಾಹಿತಿ ಹಂಚಿಕೊಳ್ಳುವ ಮೂಲಕ ಸಹಕಾರ ನೀಡುವಂತೆ ಯುಎನ್ಟಿಎಆರ್ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ.
ಯುಎನ್ಐಟಿಎಆರ್ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಅವರು, ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಮತ್ತಷ್ಟು ಸ್ವಾಸ್ಥ್ಯವನ್ನು ಕಾಪಾಡುವ ಪ್ರಯತ್ನದಲ್ಲಿ ಭಾರತ ಮುಂಚೂಣಿಯಲ್ಲಿದೆ. ಯುಎನ್ಐಟಿಎಆರ್ನ ಶ್ಲಾಘನೆಗೆ ನಾವು ಕೃತಜ್ಞರು. ನಾವೆಲ್ಲರೂ ಒಟ್ಟಾಗಿ ನಮ್ಮ ಗ್ರಹವನ್ನು ಆರೋಗ್ಯಕರವಾಗಿಸಬೇಕು ಎಂದು ಹೇಳಿದ್ದಾರೆ.
India is at the forefront of initiatives that seek to prevent non-communicable diseases and further wellness.
Grateful to @UNITAR for their kind words.
Together, we all have to make our planet healthier. https://t.co/pgiwIhknSx
— Narendra Modi (@narendramodi) March 24, 2021