ಪಿಎಂ ಆವಾಸ್ ಯೋಜನೆ : 2.6 ಲಕ್ಷ ಫೇಕ್ ಅಕೌಂಟ್‌ ಸೃಷ್ಟಿಸಿ 14 ಸಾವಿರ ಕೋಟಿ ರೂ. ನುಂಗಿದ ಖದೀಮರ - BC Suddi
ಪಿಎಂ ಆವಾಸ್ ಯೋಜನೆ : 2.6 ಲಕ್ಷ ಫೇಕ್ ಅಕೌಂಟ್‌ ಸೃಷ್ಟಿಸಿ 14 ಸಾವಿರ ಕೋಟಿ ರೂ. ನುಂಗಿದ ಖದೀಮರ

ಪಿಎಂ ಆವಾಸ್ ಯೋಜನೆ : 2.6 ಲಕ್ಷ ಫೇಕ್ ಅಕೌಂಟ್‌ ಸೃಷ್ಟಿಸಿ 14 ಸಾವಿರ ಕೋಟಿ ರೂ. ನುಂಗಿದ ಖದೀಮರ

ನವದೆಹಲಿ : ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಗೆ ಸಂಬಂಧಿಸಿದ ಹಗರಣವನ್ನು ಸಿಬಿಐ ಬುಧವಾರ ಪತ್ತೆ ಹಚ್ಚಿದೆ. ನಕಲಿ ಖಾತೆಗಳನ್ನು ಸೃಷ್ಟಿಸಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಬರುವ ಸಹಾಯಧನವನ್ನು ಪಡೆದ ಆರೋಪದಲ್ಲಿ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ನ ಪ್ರವರ್ತಕರರು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 24 ಲಕ್ಷ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿರುವುದಾಗಿ ಇತ್ತೀಚೆಗೆ ಬಿಜೆಪಿ ಪತ್ರಿಕೆಗಳಿಗೆ ಜಾಹೀರಾತು ನೀಡಿತ್ತು. ಆದರೆ, ಆ ಜಾಹೀರಾತಿನಲ್ಲಿ ಕಾಣಿಸಿಕೊಂಡ ಲಕ್ಷ್ಮೀ ದೇವಿ ಎಂಬ ಮಹಿಳೆಗೆ ಉಳಿದಿಕೊಳ್ಳಲು ಸ್ವಂತ ಮನೆಯೇ ಇಲ್ಲ. ಅವರು ಬಾಡಿಗೆ ಕೋಣೆಯೊಂದರಲ್ಲಿ ವಾಸಿಸುತ್ತಿದ್ದಾರೆ ಎನ್ನುವ ವಿಚಾರ ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿತ್ತು. ಈಗ ಪ್ರಧಾನ್‌ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ನಡೆದಿರುವ ಭಾರೀ ಹಗರಣ ಬೆಳಕಿಗೆ ಬಂದಿದೆ. ಈ ವಂಚನೆಯಿಂದಾಗಿ ಲಕ್ಷ್ಮೀ ದೇವಿ ಅಂತಹ ಮಹಿಳೆಯರಿಗೆ ಸೂರು ಸಿಕ್ಕಿಲ್ಲ.

ವಂಚನೆ ಮತ್ತು ಹಣದ ಪ್ರಕರಣದಲ್ಲಿ ಜೈಲಿನಲ್ಲಿರುವ ಸಹೋದರರಾದ ಕಪಿಲ್ ಮತ್ತು ಧೀರಜ್ ವಾಧ್ವಾನ್ ವಸತಿ ಯೋಜನೆಯಲ್ಲಿ 14 ಸಾವಿರ ಕೋಟಿ ಲಪಟಾಯಿಸಿದ್ದಾರೆ. ಕಪಿಲ್ ಮತ್ತು ಧೀರಜ್ ವಾಧ್ವಾನ್ ನಕಲಿ ಮತ್ತು ಕಾಲ್ಪನಿಕ 2.6 ಲಕ್ಷ ಗೃಹ ಸಾಲ ಖಾತೆಗಳನ್ನು ಸೃಷ್ಟಿಸಿ ಭಾರತ ಸರ್ಕಾರದಿಂದ 1,880 ಕೋಟಿ ಬಡ್ಡಿ ಸಹಾಯಧನವನ್ನು ಪಡೆದಿದ್ದಾರೆ ಎಂದು ಸಿಬಿಐ ತಿಳಿಸಿದೆ.

ಪಿಎಂಎವೈ ಅನ್ನು ಅಕ್ಟೋಬರ್ 2015 ರಲ್ಲಿ ಘೋಷಿಸಲಾಗಿದ್ದು ಈ ಮೂಲಕ ಆರ್ಥಿಕ ದುರ್ಬಲ ವಿಭಾಗಕ್ಕೆ ವಸತಿ ಸಾಲ, ಸಬ್ಸಿಡಿ ನೀಡಲಾಗುತ್ತಿದೆ. ಸಿಬಿಐ ಪ್ರಕಾರ ಈ ಸಾಲವನ್ನು ನಕಲಿ ಖಾತೆ ಮೂಲಕ 2018 ರ ಡಿಸೆಂಬರ್‌ನಲ್ಲಿ ಡಿಎಚ್‌ಎಫ್‌ಎಲ್ ಹೂಡಿಕೆದಾರರಿಗೆ ಪಿಎಂಎವೈ ಅಡಿಯಲ್ಲಿ 88,651 ಸಾಲಗಳನ್ನು ಪ್ರಕ್ರಿಯೆಗೊಳಿಸಿದೆ ಮತ್ತು 539.4 ಕೋಟಿ ರೂ. ಸಬ್ಸಿಡಿಗಳನ್ನು ಪಡೆದುಕೊಂಡಿದೆ ಮತ್ತು ಇನ್ನೂ 1,347.8 ಕೋಟಿ ರೂ ಬಾಕಿ ಇದೆ.

ಕಪಿಲ್ ಮತ್ತು ಧೀರಜ್ ವಾಧ್ವಾನ್ 2007-19ರ ನಡುವೆ ನಡುವೆ ಮುಂಬೈನ ಅಸ್ತಿತ್ವದಲ್ಲೇ ಇಲ್ಲದ ಬಾಂದ್ರಾ ಶಾಖೆಯಲ್ಲಿ 2.6 ಲಕ್ಷ ನಕಲಿ ವಸತಿ ಸಾಲ ಖಾತೆಗಳನ್ನು ತೆರೆದಿದ್ದಾರೆ. 2007 ಮತ್ತು 2019 ರ ನಡುವೆ ಈ ಖಾತೆಗಳಿಗೆ 14,046 ಕೋಟಿ ಮೊತ್ತದ ವಸತಿ ಸಾಲಗಳನ್ನು ಈ ಖಾತೆಗಳಿಗೆ ಮಂಜೂರು ಮಾಡಲಾಗಿದೆ ಎಂದು ತೋರಿಸಲಾಗಿದ್ದು.

ಆ ಪೈಕಿ 11,755.79 ರೂ.ಗಳನ್ನು ಇತರ ಕಾಲ್ಪನಿಕ ಸಂಸ್ಥೆಗಳಿಗೆ ರವಾನಿಸಲಾಗಿದೆ. ಈ ಮೊತ್ತವನ್ನು ಪಿಎಂ ವಸತಿ ಯೋಜನೆಯಲ್ಲಿ ನೀಡಲಾದ ಸಾಲ ಎಂದು ಹೇಳಿಕೊಂಡಿದೆ. ವಾಧ್ವಾನ್ ಸಹೋದರರು ಸರ್ಕಾರದ ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನ ಕೆಲವರೊಂದಿಗೆ ಶಾಮೀಲಾಗಿ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

error: Content is protected !!