ಇಂದು ಪ್ರಧಾನಿ ಬಾಂಗ್ಲಾ ಪ್ರವಾಸ - BC Suddi
ಇಂದು ಪ್ರಧಾನಿ ಬಾಂಗ್ಲಾ ಪ್ರವಾಸ

ಇಂದು ಪ್ರಧಾನಿ ಬಾಂಗ್ಲಾ ಪ್ರವಾಸ

ನವದೆಹಲಿ : ಪಂಚ ರಾಜ್ಯಗಳ ಚುನಾವಣಾ ಕಣ ರಂಗೇರುತ್ತಿರುವ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದಾರೆ. ಇನ್ನು ಕೋವಿಡ್-19 ರ ನಂತರ ಮೊದಲ ಬಾರಿಗೆ ಪ್ರಧಾನಿ ವಿದೇಶ ಪ್ರವಾಸ ಶರುಮಾಡಿದ್ದಾರೆ.

ಬಾಂಗ್ಲಾದ ಢಾಕಾಕ್ಕೆ ಆಗಮಿಸಲಿರುವ ಪ್ರಧಾನಿ ರಾಷ್ಟ್ರೀಯ ಹುತಾತ್ಮರ ಸ್ಮಾರಕದಲ್ಲಿ ಬೆಳಗ್ಗೆ 10:50ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಾಂಗ್ಲಾದೇಶದ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೊಮೆನ್ ಅವರು ಪ್ರಧಾನಿ ಮೋದಿ ಅವರನ್ನು ಮಧ್ಯಾಹ್ನ 3.15ಕ್ಕೆ ಭೇಟಿ ಮಾಡಲಿದ್ದಾರೆ. ಮಧ್ಯಾಹ್ನ 3.45ಕ್ಕೆ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ,ಸಂಜೆ 7.45ಕ್ಕೆ ಬಾಪು ಬಂಗಬಂಧು ಡಿಜಿಟಲ್ ವಿಡಿಯೋ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

error: Content is protected !!