ರಾಜಿನಾಮೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರ ಪ್ರದಾನ ಸಲಹೆಗಾರ ಪಿ. ಕೆ ಸಿನ್ಹಾ - BC Suddi
ರಾಜಿನಾಮೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರ ಪ್ರದಾನ ಸಲಹೆಗಾರ ಪಿ. ಕೆ ಸಿನ್ಹಾ

ರಾಜಿನಾಮೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರ ಪ್ರದಾನ ಸಲಹೆಗಾರ ಪಿ. ಕೆ ಸಿನ್ಹಾ

ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಪ್ರದಾನ ಸಲಹೆಗಾರ ಪಿ. ಕೆ ಸಿನ್ಹಾ ರಾಜಿನಾಮೆ ನೀಡಿದ್ದಾರೆ. ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ 18ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2019 ರಲ್ಲಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ಪಿ .ಕೆ ಸಿನ್ಹಾ ಅವರಿಗೆ ಅವಲಾಶ ಕಲ್ಪಿಸಲು ಪ್ರಧಾನ ಮಂತ್ರಿಯವರ ಪ್ರಧಾನ ಸಲಹೆಗಾರ ಹುದ್ದೆಯನ್ನು ರಚಿಸಲಾಗಿತ್ತು.

ಸರ್ಕಾರದ ಹಿರಿಯ ಅಧಿಕಾರಿಗಳಾದ ಪಿ ಕೆ ಸಿನ್ಹಾ ನಾಲ್ಕು ವರ್ಷಗಳ ಕಾಲ ಕ್ಯಾಬಿನೆಟ್ ಸದಸ್ಯರಾಗಿ ಮುರು ಅವಧಿಗಳನ್ನು ಪೂರೈಸಿದ್ದರು. ಪ್ರಧಾನಿ ಮೋದಿಯವರ ಕಚೇರಿಯ ಭಾಗವಾಗಿದ್ದ ಮತ್ತೊಬ್ಬ ಅಧಿಕಾರಿ ನೃಪೇಂದ್ರ ಮಿಶ್ರಾ ಅವರು ಪ್ರಧಾನ ಮಂತ್ರಿ ಕಚೇರಿಯಿಂದ ಹೊರಬಂದ ನಂತರ ಸಿನ್ಹಾ ಅವರನ್ನು ಪ್ರಧಾನ ಸಲಹೆಗಾರರಾಗಿ ನೇಮಕ ಮಾಡಿಕೊಳ್ಳಲಾಗಿತ್ತು.

ಇಬ್ಬರೂ ಕೂಡ ಪ್ರಧಾನ ಮಂತ್ರಿಯ ಅತ್ಯಂತ ವಿಶ್ವಾಸಾರ್ಹ ಅಧಿಕಾರಿಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತದೆ. ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಸಿನ್ಹಾ ಮೂರು ಕೇಂದ್ರ ಸಚಿವಾಲಯಗಳೊಂದಿಗೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

 

error: Content is protected !!