ಕೊರೊನಾ ಉಲ್ಬಣ: 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಿ, ಸುಪ್ರೀಂಗೆ PIL - BC Suddi
ಕೊರೊನಾ ಉಲ್ಬಣ: 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಿ, ಸುಪ್ರೀಂಗೆ PIL

ಕೊರೊನಾ ಉಲ್ಬಣ: 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಿ, ಸುಪ್ರೀಂಗೆ PIL

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಹಾಗಾಗಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ -19 ಲಸಿಕೆ ನೀಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಯೊಂದು ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿದೆ.
ಎರಡನೇ ಅಲೆಯಲ್ಲಿ ಕೊರೊನಾ ಉಲ್ಬಣವನ್ನು ನಿಯಂತ್ರಿಸಲು ಎಲ್ಲಾ ಯುವಜನತೆ ಹಾಗೂ ದುಡಿಯುವ ವರ್ಗಕ್ಕೆ ವ್ಯಾಪಕವಾದ ಲಸಿಕೆ ಅಗತ್ಯ ಎಂದು ವಕೀಲರಾದ ರಶ್ಮಿ ಸಿಂಗ್ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಆಡಳಿತವು ಲಸಿಕೆಯ ಎರಡು ಡೋಸ್ ಗಳನ್ನು ನೀಡುವುದಕ್ಕಾಗಿ ಆರರಿಂದ ಎಂಟು ವಾರಗಳ ಅವಧಿ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಲಸಿಕೆ ಪಡೆಯುವುದಕ್ಕೆ ವಿಳಂಬವಾಗುವುದಲ್ಲದೆ ಆ ವೇಳೆಗೆ ಕೋವಿಡ್ 19 ವೈರಸ್ ವೇಗವಾಗಿ ಹರಡಬಹುದು ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

18-45 ವರ್ಷ ವಯಸ್ಸಿನವರಿಗೆ ಲಸಿಕೆಗಳನ್ನು ನಿರಾಕರಿಸುವುದು ಅನಿಯಂತ್ರಿತ, “ತಾರತಮ್ಯ ಮತ್ತು ಅವಿವೇಕ”ದ ನಿರ್ಧಾರ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ವಾರ ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುತ್ತಿಲ್ಲ, ಹಾಗೂ ಒಂದು ಕಂಟೆಸ್ಟೆಂಟ್ ಎಲಿಮಿನೇಶನ್ ಪಕ್ಕಾ: ಪರಮೇಶ್ವರ್ ಗುಂಡ್ಕಲ್ ಸ್ಪಷ್ಟಣೆ